೨ ಅರಸುಗಳು 8:4

ಅರಸನು ದೇವರ ಮನುಷ್ಯನ ಸೇವ ಕನಾದ ಗೇಹಜಿಯ ಸಂಗಡ ಮಾತನಾಡಿ--ಎಲೀ ಷನು ಮಾಡಿದ ಎಲ್ಲಾ ದೊಡ್ಡ ಕ್ರಿಯೆಗಳನ್ನು ನನಗೆ ವಿವರವಾಗಿ ತಿಳಿಸೆಂದು ಅವನಿಗೆ ಹೇಳಿದನು.

ಸಂದರ್ಭದೊಂದಿಗೆ ಓದಿ · ೨ ಅರಸುಗಳು 8

2ಆಗ ಆ ಸ್ತ್ರೀಯು ಎದ್ದು ದೇವರ ಮನುಷ್ಯನ ಮಾತಿನ ಪ್ರಕಾರವೇ ಮಾಡಿ ತನ್ನ ಮನೆಯವರ ಸಂಗಡ ಹೋಗಿ ಫಿಲಿಷ್ಟಿಯರ ದೇಶದಲ್ಲಿ ಏಳು ವರುಷ ವಾಸವಾಗಿದ್ದಳು.

3ಏಳು ವರುಷದ ತರುವಾಯ ಏನಾಯಿತಂದರೆ, ಆ ಸ್ತ್ರೀಯು ಫಿಲಿಷ್ಟಿಯರ ದೇಶವನ್ನು ಬಿಟ್ಟು ತಿರಿಗಿ ಬಂದು ತನ್ನ ಮನೆಗೋಸ್ಕರವೂ ಹೊಲಕ್ಕೋಸ್ಕರವೂ ಅರಸನಿಗೆ ಮೊರೆಯಿಟ್ಟಳು.

4ಅರಸನು ದೇವರ ಮನುಷ್ಯನ ಸೇವ ಕನಾದ ಗೇಹಜಿಯ ಸಂಗಡ ಮಾತನಾಡಿ--ಎಲೀ ಷನು ಮಾಡಿದ ಎಲ್ಲಾ ದೊಡ್ಡ ಕ್ರಿಯೆಗಳನ್ನು ನನಗೆ ವಿವರವಾಗಿ ತಿಳಿಸೆಂದು ಅವನಿಗೆ ಹೇಳಿದನು.

5ಅವನು ಸತ್ತವನನ್ನು ಬದುಕಿಸಿದನೆಂದು, ಗೇಹಜಿಯು ಅರಸ ನಿಗೆ ವಿವರವಾಗಿ ಹೇಳುತ್ತಿರುವಾಗ ಏನಾಯಿತಂದರೆ ಇಗೋ, ಬದುಕಿಸಿದ ಮಗನ ತಾಯಿಯಾದ ಆ ಸ್ತ್ರೀಯು ತನ್ನ ಮನೆಗೋಸ್ಕರವೂ ಹೊಲಕ್ಕೋಸ್ಕರವೂ ಅರಸನಿಗೆ ಮೊರೆಯಿಡುತ್ತಿದ್ದಳು. ಆಗ ಗೇಹಜಿಯುನನ್ನ ಒಡೆಯನೇ, ಅರಸನೇ, ಇವಳೇ ಆ ಸ್ತ್ರೀಯು, ಎಲೀಷನು ಬದುಕಿಸಿದ ಇವಳ ಮಗನು ಇವನೇ ಅಂದನು.

6ಅರಸನು ಆ ಸ್ತ್ರೀಯನ್ನು ಕೇಳಿದಾಗ ಅವಳು ವಿವರವಾಗಿ ಹೇಳಿದಳು. ಆಗ ಅರಸನು ಅವಳಿಗಾಗಿ ಒಬ್ಬ ಅಧಿಕಾರಿಯನ್ನು ಕಳುಹಿಸಿಕೊಟ್ಟು ಅವಳಿಗೆ ಉಂಟಾದದ್ದನ್ನೆಲ್ಲಾ ಅವಳು ದೇಶವನ್ನು ಬಿಟ್ಟ ದಿನ ಮೊದಲುಗೊಂಡು ಆ ಕಾಲದ ವರೆಗೂ ಆ ಹೊಲದ ಹುಟ್ಟುವಳಿಯೆಲ್ಲಾ ಅವಳಿಗೆ ಬರುವ ಹಾಗೆ ಮಾಡು ಅಂದನು.

೨ ಅರಸುಗಳು 8 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी