ಇದಾದ ಮೇಲೆ ಅಬ್ರಾಮನು ಐಗುಪ್ತಕ್ಕೆ ಬಂದಾಗ ಐಗುಪ್ತ್ಯರು ಆ ಸ್ತ್ರೀಯು ಬಹಳ ಸೌಂದರ್ಯ ವುಳ್ಳವಳೆಂದು ನೋಡಿದರು.
12ಹೀಗಿರುವದರಿಂದ ಐಗುಪ್ತ್ಯರು ನಿನ್ನನ್ನು ನೋಡಿ--ಈಕೆಯು ಅವನ ಹೆಂಡತಿ ಎಂದು ಹೇಳುವರು. ನನ್ನನ್ನು ಕೊಂದುಹಾಕಿ ನಿನ್ನನ್ನು ಜೀವದಲ್ಲಿ ಉಳಿಸುವರು.
13ನಿನ್ನ ದೆಸೆಯಿಂದ ನನಗೆ ಒಳ್ಳೆಯದಾಗಿ ನನ್ನ ಪ್ರಾಣವು ಉಳಿಯುವಂತೆ ನೀನು ನನ್ನ ಸಹೋದರಿ ಎಂದು ಹೇಳಬೇಕು ಎಂದು ಕೇಳಿಕೊಳ್ಳುತ್ತೇನೆ ಅಂದನು.
14ಇದಾದ ಮೇಲೆ ಅಬ್ರಾಮನು ಐಗುಪ್ತಕ್ಕೆ ಬಂದಾಗ ಐಗುಪ್ತ್ಯರು ಆ ಸ್ತ್ರೀಯು ಬಹಳ ಸೌಂದರ್ಯ ವುಳ್ಳವಳೆಂದು ನೋಡಿದರು.
15ಫರೋಹನ ಪ್ರಧಾ ನರು ಸಹ ಆಕೆಯನ್ನು ನೋಡಿ ಫರೋಹನ ಮುಂದೆ ಆಕೆಯನ್ನು ಹೊಗಳಲಾಗಿ ಆ ಸ್ತ್ರೀಯು ಫರೋಹನ ಮನೆಗೆ ಒಯ್ಯಲ್ಪಟ್ಟಳು.
16ಅವನು ಆಕೆಗೋಸ್ಕರ ಅಬ್ರಾಮನಿಗೆ ಒಳ್ಳೇದನ್ನು ಮಾಡಿದನು. ಅವನಿಗೆ ಕುರಿಗಳೂ ಎತ್ತುಗಳೂ ಕತ್ತೆಗಳೂ ದಾಸರೂ ದಾಸಿ ಯರೂ ಹೆಣ್ಣುಕತ್ತೆಗಳೂ ಒಂಟೆಗಳೂ ದೊರೆತವು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ