ಆದಕಾರಣ ನಾನು ನಿನಗೆ ಆಜ್ಞಾಪಿಸು ವದೇನಂದರೆ--ಮೂರು ಪಟ್ಟಣಗಳನ್ನು ನಿನಗಾಗಿ ಪ್ರತ್ಯೇಕಿಸಬೇಕು.
5ಹೇಗಂದರೆ--ಒಬ್ಬನು ತನ್ನ ನೆರೆಯ ವನ ಸಂಗಡ ಕಟ್ಟಿಗೆ ಕಡಿಯುವದಕ್ಕೆ ಅಡವಿಗೆ ಹೋಗ ಲಾಗಿ, ಕೊಡಲಿ ಹಿಡಿದ ಅವನ ಕೈ ಮರವನ್ನು ಕಡಿಯುವದಕ್ಕೆ ಚಾಚಿರುವಲ್ಲಿ ಆ ಕಬ್ಬಿಣವು ಕಾವನ್ನು ಬಿಟ್ಟು ಅವನ ನೆರೆಯವನು ಸಾಯುವಹಾಗೆ ತಗಲಿದರೆ,
6ರಕ್ತ ವಿಚಾರಕನು ತನ್ನ ಹೃದಯದಲ್ಲಿ ಕೋಪ ಉರಿಯುತ್ತಿರುವಾಗ ಕೊಲೆಪಾತಕನನ್ನು ಹಿಂದಟ್ಟಿ, ಮಾರ್ಗ ದೂರವಾಗಿರುವ ಕಾರಣ ಅವನನ್ನು ಹಿಡಿದು ಪೂರ್ವಕಾಲದಲ್ಲಿ ಹಗೆಮಾಡದೆ ಇದ್ದದರಿಂದ ಮರ ಣಕ್ಕೆ ಪಾತ್ರನಾಗದ ಇವನನ್ನು ಕೊಂದುಹಾಕದ ಹಾಗೆ ಅವನು ಆ ಪಟ್ಟಣಗಳಲ್ಲಿ ಒಂದಕ್ಕೆ ಓಡಿಹೋಗಿ ಬದುಕಬೇಕು.
7ಆದಕಾರಣ ನಾನು ನಿನಗೆ ಆಜ್ಞಾಪಿಸು ವದೇನಂದರೆ--ಮೂರು ಪಟ್ಟಣಗಳನ್ನು ನಿನಗಾಗಿ ಪ್ರತ್ಯೇಕಿಸಬೇಕು.
8ಇದಲ್ಲದೆ ನಾನು ಈಹೊತ್ತು ನಿನಗೆ ಆಜ್ಞಾಪಿಸುವ ಈ ಆಜ್ಞೆಯನ್ನೆಲ್ಲಾ ನೀನು ಕಾಪಾಡಿ ಕೈಕೊಳ್ಳಬೇಕು. ನಿನ್ನ ದೇವರಾದ ಕರ್ತನನ್ನು ಪ್ರೀತಿಮಾಡಿ ಎಂದೆಂದಿಗೂ ಆತನ ಮಾರ್ಗದಲ್ಲಿ ನಡೆಯಲಾಗಿ
9ಕರ್ತನು ನಿನ್ನ ಪಿತೃಗಳಿಗೆ ಪ್ರಮಾಣಮಾಡಿದಂತೆ ನಿನ್ನ ಮೇರೆಯನ್ನು ವಿಸ್ತಾರಮಾಡಿ ನಿನ್ನ ಪಿತೃಗಳಿಗೆ ಕೊಡುತ್ತೇನೆಂದು ಹೇಳಿದ ದೇಶವನ್ನೆಲ್ಲಾ ನಿನಗೆ ಕೊಟ್ಟರೆ
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ