ಆಗ ಸೌಲನು--ಜನರ ಎಲ್ಲಾ ಮುಖ್ಯಸ್ಥರೇ, ಇಲ್ಲಿ ಬನ್ನಿರಿ; ಈಹೊತ್ತು ಈ ಪಾಪ ಯಾವದರಿಂದ ಉಂಟಾಯಿತೆಂದು ತಿಳುಕೊಂಡು ನೋಡಿರಿ.
36ಸೌಲನು ಜನರಿಗೆ--ನಾವು ಈ ರಾತ್ರಿಯಲ್ಲಿ ಫಿಲಿಷ್ಟಿಯರನ್ನು ಬೆನ್ನಟ್ಟಿಹೋಗಿ ಉದಯಕಾಲದ ವರೆಗೆ ಅವರನ್ನು ಸುಲುಕೊಂಡು ಅವರಲ್ಲಿ ಒಬ್ಬನನ್ನಾದರೂ ಉಳಿಸಬಾರದು ಅಂದನು. ಅದಕ್ಕೆ ಜನರು--ನಿನ್ನ ಕಣ್ಣುಗಳಿಗೆ ಒಳ್ಳೇದಾಗಿ ತೋರುವದನ್ನೆಲ್ಲಾ ಮಾಡು ಅಂದರು. ಆಗ ಯಾಜಕನು--ದೇವರ ಸನ್ನಿಧಿಗೆ ಹೋಗೋಣ ಅಂದನು.
37ಸೌಲನು--ನಾನು ಫಿಲಿಷ್ಟಿಯರನ್ನು ಹಿಂಬಾಲಿಸಿ ಹೋಗಲೋ? ನೀನು ಅವರನ್ನು ಇಸ್ರಾಯೇಲ್ಯರ ಕೈಗೆ ಒಪ್ಪಿಸಿಕೊಡುವಿಯೋ ಎಂದು ದೇವರ ಆಲೋಚನೆಯನ್ನು ಕೇಳಿದನು; ಆದರೆ ಆತನು ಅವನಿಗೆ ಆ ದಿವಸದಲ್ಲಿ ಪ್ರತ್ಯುತ್ತರ ಕೊಡದೆ ಹೋದನು.
38ಆಗ ಸೌಲನು--ಜನರ ಎಲ್ಲಾ ಮುಖ್ಯಸ್ಥರೇ, ಇಲ್ಲಿ ಬನ್ನಿರಿ; ಈಹೊತ್ತು ಈ ಪಾಪ ಯಾವದರಿಂದ ಉಂಟಾಯಿತೆಂದು ತಿಳುಕೊಂಡು ನೋಡಿರಿ.
39ನನ್ನ ಕುಮಾರನಾದ ಯೋನಾತಾನ ನಿಂದಾದರೂ ಉಂಟಾಗಿದ್ದರೆ ಅವನು ಸಾಯಲೇ ಸಾಯುವನೆಂದು ಇಸ್ರಾಯೇಲನ್ನು ರಕ್ಷಿಸುವ ಕರ್ತನ ಮೇಲೆ ಆಣೆ ಇಟ್ಟು ಹೇಳುತ್ತೇನೆ ಅಂದನು. ಆದರೆ ಸಕಲ ಜನರಲ್ಲಿ ಒಬ್ಬನಾದರೂ ಅವನಿಗೆ ಪ್ರತ್ಯುತ್ತರ ಕೊಡಲಿಲ್ಲ.
40ಆಗ ಸೌಲನು ಸಮಸ್ತ ಇಸ್ರಾಯೇ ಲಿಗೆ--ನೀವು ಒಂದು ಕಡೆಯಲ್ಲಿ ಇರ್ರಿ; ನಾನೂ ನನ್ನ ಮಗನಾದ ಯೋನಾತಾನನೂ ಒಂದು ಕಡೆಯಲ್ಲಿ ಇರುತ್ತೇವೆ ಅಂದನು. ಜನರು ಸೌಲನಿಗೆ--ನಿನ್ನ ದೃಷ್ಟಿಗೆ ಒಳ್ಳೇದಾಗಿ ತೋರುವದನ್ನು ಮಾಡು ಅಂದರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ