ಕರ್ತನು ಹಿಜ್ಕೀಯನ ಮಾತು ಕೇಳಿ ಜನರನ್ನು ಗುಣಮಾಡಿದನು.
18ಯಾಕಂದರೆ ಜನರಲ್ಲಿ ಅನೇಕರು--ಎಫ್ರಾ ಯಾಮ್, ಮನಸ್ಸೆ, ಇಸ್ಸಾಕಾರ್, ಜೆಬುಲೂನ್ ಇವ ರಲ್ಲಿ ಅನೇಕರು ತಮ್ಮನ್ನು ಶುದ್ಧ ಮಾಡಿಕೊಳ್ಳದೆ, ಬರೆಯಲ್ಪಟ್ಟ ಪ್ರಕಾರವಲ್ಲದೆ ಪಸ್ಕವನ್ನು ಉಂಡರು.
19ಆದರೆ ಹಿಜ್ಕೀಯನು ಅವರಿಗೋಸ್ಕರ ಪ್ರಾರ್ಥಿಸಿಯಾವನಾದರೂ ಪರಿಶುದ್ಧ ಸ್ಥಾನದ ಶುದ್ಧಿಯ ಪ್ರಕಾರ ಶುಚಿಯಾಗದೆ ಇದ್ದರೂ ತನ್ನ ಪಿತೃಗಳ ಕರ್ತನಾದ ದೇವರಾಗಿರುವ ದೇವರನ್ನು ಹುಡುಕಲು ತನ್ನ ಹೃದಯ ವನ್ನು ಸಿದ್ಧಮಾಡುವವನ ಪಾಪವನ್ನು ದಯವುಳ್ಳ ಕರ್ತನು ಮುಚ್ಚಲಿ ಎಂದು ಹೇಳಿದನು.
20ಕರ್ತನು ಹಿಜ್ಕೀಯನ ಮಾತು ಕೇಳಿ ಜನರನ್ನು ಗುಣಮಾಡಿದನು.
21ಯೆರೂಸಲೇಮಿನಲ್ಲಿದ್ದ ಇಸ್ರಾಯೇಲಿನ ಮಕ್ಕಳು ಹುಳಿ ಇಲ್ಲದ ರೊಟ್ಟಿಯ ಹಬ್ಬವನ್ನು ಏಳು ದಿವಸ ಸಂತೋಷದಿಂದ ಆಚರಿಸಿದರು. ಇದಲ್ಲದೆ ಲೇವಿ ಯರೂ ಯಾಜಕರೂ ಮಹಾಶಬ್ದದ ವಾದ್ಯಗಳಿಂದ ಕರ್ತನಿಗೆ ಹಾಡಿ ಪ್ರತಿ ದಿನದಲ್ಲಿಯೂ ಕರ್ತನನ್ನು ಸ್ತುತಿಸಿದರು.
22ಇದಲ್ಲದೆ ಹಿಜ್ಕೀಯನು ಕರ್ತನ ಉತ್ತ ಮವಾದ ಬೋಧನೆಯನ್ನು ಬೋಧಿಸಿದ ಸಮಸ್ತ ಲೇವಿ ಯರಿಗೆ ಸಮಾಧಾನವಾಗಿ ಮಾತನಾಡಿದನು. ಅವರು ಹಬ್ಬವನ್ನು ಏಳು ದಿನಗಳ ಪರ್ಯಂತರ ಭೋಜನ ಮಾಡುತ್ತಾ ಸಮಾಧಾನದ ಬಲಿಗಳನ್ನು ಅರ್ಪಿಸುತ್ತಾ ತಮ್ಮ ಪಿತೃಗಳ ದೇವರಾದ ಕರ್ತನಿಗೆ ಅರಿಕೆಮಾಡುತ್ತಾ ಆಚರಿಸಿದ್ದರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ