ಆದಿಕಾಂಡ 4:7

ನೀನು ಒಳ್ಳೆಯದನ್ನು ಮಾಡಿದರೆ ಅಂಗೀಕರಿಸಲ್ಪಡುವದಿಲ್ಲವೇ? ನೀನು ಒಳ್ಳೆಯದನ್ನು ಮಾಡದೆ ಹೋದರೆ ಪಾಪವು ಬಾಗಲಲ್ಲಿ ಹೊಂಚಿ ಕೊಂಡಿರುವದು; ನಿನ್ನ ಮೇಲೆ ಅದಕ್ಕೆ ಆಶೆ ಇರುವದು, ನೀನು ಅದನ್ನು ಆಳಬೇಕು ಎಂದು ಹೇಳಿದನು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 4

5ಆದರೆ ಕಾಯಿನನನ್ನೂ ಅವನ ಕಾಣಿಕೆಯನ್ನೂ ಆತನು ಗೌರವಿಸಲಿಲ್ಲ. ಆಗ ಕಾಯಿ ನನು ಬಹು ಕೋಪಗೊಂಡನು, ಅವನ ಮುಖವು ಕಳೆಗುಂದಿತು.

6ಆಗ ಕರ್ತನು ಕಾಯಿನನಿಗೆ--ಯಾಕೆ ಕೋಪಗೊಂಡಿದ್ದೀ? ಯಾಕೆ ನಿನ್ನ ಮುಖವು ಕಳೆಗುಂದಿತು?

7ನೀನು ಒಳ್ಳೆಯದನ್ನು ಮಾಡಿದರೆ ಅಂಗೀಕರಿಸಲ್ಪಡುವದಿಲ್ಲವೇ? ನೀನು ಒಳ್ಳೆಯದನ್ನು ಮಾಡದೆ ಹೋದರೆ ಪಾಪವು ಬಾಗಲಲ್ಲಿ ಹೊಂಚಿ ಕೊಂಡಿರುವದು; ನಿನ್ನ ಮೇಲೆ ಅದಕ್ಕೆ ಆಶೆ ಇರುವದು, ನೀನು ಅದನ್ನು ಆಳಬೇಕು ಎಂದು ಹೇಳಿದನು.

8ಆಗ ಕಾಯಿನನು ತನ್ನ ಸಹೋದರನಾದ ಹೇಬೆಲನ ಸಂಗಡ ಮಾತನಾಡಿದನು; ತರುವಾಯ ಆದದ್ದೇ ನಂದರೆ, ಅವರು ಹೊಲದಲ್ಲಿದ್ದಾಗ ಕಾಯಿನನು ತನ್ನ ಸಹೋದರನಾದ ಹೇಬೆಲನಿಗೆ ವಿರುದ್ಧವಾಗಿ ಎದ್ದು ಅವನನ್ನು ಕೊಂದುಹಾಕಿದನು.

9ಆಗ ಕರ್ತನು ಕಾಯಿನನಿಗೆ--ನಿನ್ನ ಸಹೋದರ ನಾದ ಹೇಬೆಲನು ಎಲ್ಲಿ ಅಂದನು. ಅದಕ್ಕವನು-- ನಾನು ಅರಿಯೆನು; ನನ್ನ ಸಹೋದರನನ್ನು ನಾನು ಕಾಯುವವನೋ ಅಂದನು.

ಆದಿಕಾಂಡ 4 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी