ಅರಣ್ಯಕಾಂಡ 20:3

ಜನರು ಮೋಶೆಯ ಸಂಗಡ ವ್ಯಾಜ್ಯವಾಡಿ ಹೇಳಿದ್ದೇನಂದರೆ--ನಮ್ಮ ಸಹೋದರರು ಕರ್ತನ ಮುಂದೆ ಸತ್ತುಹೋದಾಗಲೇ ನಾವು ಸಹ ಸತ್ತು ಹೋಗಿದ್ದರೆ ಚೆನ್ನಾಗಿತ್ತು.

ಸಂದರ್ಭದೊಂದಿಗೆ ಓದಿ · ಅರಣ್ಯಕಾಂಡ 20

1ಇಸ್ರಾಯೇಲ್‌ ಮಕ್ಕಳ ಸಭೆಯೆಲ್ಲಾ ಜಿನ್‌ ಎಂಬ ಅರಣ್ಯಕ್ಕೆ ಮೊದಲನೇ ತಿಂಗಳಿನಲ್ಲಿ ಬಂದರು; ಜನರು ಕಾದೇಶಿನಲ್ಲಿ ವಾಸಿಸುವಾಗ ಅಲ್ಲಿ ಮಿರ್ಯಾಮಳು ಸತ್ತು ಅಲ್ಲೇ ಹೂಣಲ್ಪಟ್ಟಳು.

2ಆಗ ಸಭೆಗೆ ನೀರಿಲ್ಲದೆ ಇರಲಾಗಿ ಅವರು ಮೋಶೆಗೂ ಆರೋನನಿಗೂ ವಿರೋಧವಾಗಿ ಕೂಡಿ ಕೊಂಡರು.

3ಜನರು ಮೋಶೆಯ ಸಂಗಡ ವ್ಯಾಜ್ಯವಾಡಿ ಹೇಳಿದ್ದೇನಂದರೆ--ನಮ್ಮ ಸಹೋದರರು ಕರ್ತನ ಮುಂದೆ ಸತ್ತುಹೋದಾಗಲೇ ನಾವು ಸಹ ಸತ್ತು ಹೋಗಿದ್ದರೆ ಚೆನ್ನಾಗಿತ್ತು.

4ನಾವೂ ನಮ್ಮ ಪಶುಗಳೂ ಸಾಯುವ ಹಾಗೆ ನೀವು ಯಾಕೆ ಕರ್ತನ ಸಭೆಯನ್ನು ಈ ಅರಣ್ಯಕ್ಕೆ ತಂದಿರಿ?

5ಈ ಕೆಟ್ಟ ಸ್ಥಳಕ್ಕೆ ನಮ್ಮನ್ನು ತರುವದಕ್ಕೆ ಯಾಕೆ ನಮ್ಮನ್ನು ಐಗುಪ್ತ ದೇಶದೊಳ ಗಿಂದ ಕರಕೊಂಡು ಬಂದಿರಿ? ಈ ಸ್ಥಳದಲ್ಲಿ ಬೀಜ ವಾದರೂ ಅಂಜೂರವಾದರೂ ದ್ರಾಕ್ಷೇತೋಟವಾ ದರೂ ದಾಳಿಂಬರ ಹಣ್ಣಾದರೂ ಇಲ್ಲ; ಕುಡಿಯುವದಕ್ಕೆ ನೀರು ಸಹ ಇಲ್ಲ ಅಂದರು.

ಅರಣ್ಯಕಾಂಡ 20 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी