ಅವರು ಬೆನ್ಯಾವಿಾನನ ಮಕ್ಕಳಿಗೆನೀವು ಹೋಗಿ ದ್ರಾಕ್ಷೇ ತೋಟಗಳಲ್ಲಿ ಹೊಂಚಿ ಕೊಂಡಿರ್ರಿ.
18ನಾವಾದರೋ ನಮ್ಮ ಕುಮಾರ್ತೆಯರಲ್ಲಿ ಅವರಿಗೆ ಹೆಣ್ಣು ಕೊಡಕೂಡದು. ಯಾಕಂದರೆ, ಬೆನ್ಯಾವಿಾನ್ಯರಿಗೆ ಹೆಣ್ಣು ಕೊಡುವವನು ಶಪಿಸಲ್ಪಡಲೆಂದು ಇಸ್ರಾಯೇ ಲಿನ ಮಕ್ಕಳು ಆಣೆ ಇಟ್ಟುಕೊಂಡಿದ್ದಾರೆ ಅಂದರು.
19ಅವರು--ಇಗೋ, ಬೇತೇಲಿಗೆ ಉತ್ತರದಲ್ಲಿಯೂ ಬೇತೇಲಿನಿಂದ ಶೆಕೆಮಿಗೆ ಹೋಗುವ ಹೆದ್ದಾರಿಯ ಮೂಡಲಲ್ಲಿಯೂ ಲೆಬೋನಕ್ಕೆ ದಕ್ಷಿಣದಲ್ಲಿರುವ ಶೀಲೋವಿನಲ್ಲಿ ಪ್ರತಿ ವರುಷ ಕರ್ತನ ಹಬ್ಬ ಉಂಟೆಂದು ಹೇಳಿದರು.
20ಅವರು ಬೆನ್ಯಾವಿಾನನ ಮಕ್ಕಳಿಗೆನೀವು ಹೋಗಿ ದ್ರಾಕ್ಷೇ ತೋಟಗಳಲ್ಲಿ ಹೊಂಚಿ ಕೊಂಡಿರ್ರಿ.
21ಇಗೋ, ಶೀಲೋವಿನ ಕುಮಾರ್ತೆ ಯರು ನಾಟ್ಯಮಾಡುತ್ತಾ ಹೊರಟು ಬರುವರು. ನೀವು ಅವರನ್ನು ನೋಡಿದಾಗ ದ್ರಾಕ್ಷೇ ತೋಟಗಳಿಂದ ಹೊರಟು ಶೀಲೋವಿನ ಕುಮಾರ್ತೆಯರಲ್ಲಿ ನಿಮ್ಮಲ್ಲಿ ಅವನವನು ತನಗೆ ಹೆಂಡತಿಯಾಗಿ ಒಬ್ಬೊಬ್ಬಳನ್ನು ಹಿಡುಕೊಂಡು ಬೆನ್ಯಾವಿಾನನ ದೇಶಕ್ಕೆ ಹೋಗಿರಿ ಎಂದು ಆಜ್ಞಾಪಿಸಿದರು.
22ಅವರ ತಂದೆಗಳಾದರೂ ಅವರ ಸಹೋದರರಾದರೂ ನಮ್ಮ ಸಂಗಡ ವ್ಯಾಜ್ಯ ವಾಡುವದಕ್ಕೆ ಬಂದರೆ ನಾವು ಅವರಿಗೆ--ಯುದ್ದದಲ್ಲಿ ನಾವು ಅವನಿಗೆ ಹೆಂಡತಿಯನ್ನು ತಕ್ಕೊಳ್ಳದ ಕಾರಣ ನಮಗೋಸ್ಕರ ಅವರ ಮೇಲೆ ದಯೆ ತೋರಿಸಿರಿ. ಯಾಕಂದರೆ ನೀವು ಈ ಸಮಯದಲ್ಲಿ ಅವರಿಗೆ ಕೊಟ್ಟು ಅಪರಾಧಸ್ಥರಾಗಲಿಲ್ಲ ಎಂಬದಾಗಿ ಹೇಳುತ್ತೇವೆ ಅಂದರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ