ಯೆರೆಮಿಯ 48:29

ಮೋವಾ ಬಿನ ಹೆಮ್ಮೆಯನ್ನು ಕುರಿತು ಅದರ ಮಹಾಗರ್ವವನ್ನ್ನೂ ಡಂಬವನ್ನೂ ಅಹಂಕಾರವನ್ನೂ ಬಡಾಯಿಯನ್ನೂ ಸೊಕ್ಕಿನ ಹೃದಯವನ್ನೂ ಕುರಿತು ಕೇಳಿದ್ದೇವೆ.

ಸಂದರ್ಭದೊಂದಿಗೆ ಓದಿ · ಯೆರೆಮಿಯ 48

27ನಿನ್ನೊಳಗೆ ಇಸ್ರಾಯೇಲೂ ಹಾಸ್ಯಕಾಗಿರಲಿಲ್ಲವೋ? ಅದು ಕಳ್ಳರೊಳಗೆ ಸಿಕ್ಕಿತೇನೋ, ನೀನು ಅವರ ವಿಷಯ ಯಾವಾಗ ಮಾತನಾಡಿದಂದಿನಿಂದ ಸಂತೋಷಕ್ಕಾಗಿ ತಲೆ ಅಲ್ಲಾಡಿಸಿದಿಯಲ್ಲಾ.

28ಮೋವಾಬಿನಲ್ಲಿ ವಾಸ ವಾಗಿರುವವರೇ, ಪಟ್ಟಣಗಳನ್ನು ಬಿಟ್ಟು ಬಂಡೆಯಲ್ಲಿ ವಾಸವಾಗಿರ್ರಿ; ಸಂದುಗಳ ಬಾಯಿಯ ಪಕ್ಕಗಳಲ್ಲಿ ಗೂಡುಕಟ್ಟುವ ಪಾರಿವಾಳದ ಹಾಗಿರ್ರಿ.

29ಮೋವಾ ಬಿನ ಹೆಮ್ಮೆಯನ್ನು ಕುರಿತು ಅದರ ಮಹಾಗರ್ವವನ್ನ್ನೂ ಡಂಬವನ್ನೂ ಅಹಂಕಾರವನ್ನೂ ಬಡಾಯಿಯನ್ನೂ ಸೊಕ್ಕಿನ ಹೃದಯವನ್ನೂ ಕುರಿತು ಕೇಳಿದ್ದೇವೆ.

30ನಾನು ಅದರ ಕೋಪೋ ದ್ರೇಕವನ್ನು ಬಲ್ಲೆನೆಂದು ಕರ್ತನು ಅನ್ನುತ್ತಾನೆ; ಆದರೆ ಅದು ಹಾಗೆ ಆಗುವದಿಲ್ಲ; ಅವನ ಸುಳ್ಳುಗಳು ಸರಿ ಬೀಳುವದಿಲ್ಲ.

31ಆದದರಿಂದ ನಾನು ಮೋವಾಬಿನ ನಿಮಿತ್ತ ಗೋಳಿಡುವೆನು; ಸಮಸ್ತ ಮೋವಾಬಿನ ನಿಮಿತ್ತ ಕೂಗುವೆನು; ಕೀರ್‌ ಹೆರೆಸಿನ ಮನುಷ್ಯರ ನಿಮಿತ್ತ ನನ್ನ ಹೃದಯವು ದುಃಖಿಸುವದು.

ಯೆರೆಮಿಯ 48 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी