ಅರಣ್ಯಕಾಂಡ 3:39

ಮೋಶೆಯೂ ಆರೋನನೂ ಕರ್ತನ ಆಜ್ಞೆಯ ಪ್ರಕಾರ ಕುಟುಂಬಗಳ ಮೇರೆಗೆ ಲೆಕ್ಕ ಮಾಡಿದ ಎಲ್ಲಾ ಲೇವಿಯರು ಒಂದು ತಿಂಗಳು ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳ ಗಂಡಸರೆಲ್ಲರು ಲೆಕ್ಕದ ಪ್ರಕಾರ ಇಪ್ಪತ್ತೆರಡು ಸಾವಿರ ಮಂದಿ.

ಸಂದರ್ಭದೊಂದಿಗೆ ಓದಿ · ಅರಣ್ಯಕಾಂಡ 3

37ಅಂಗಳದ ಸುತ್ತಮುತ್ತಲಿರುವ ಕಂಬಗಳೂ ಅವುಗಳ ಕುಣಿಕೆಗಳೂ ಗೂಟಗಳೂ ಹಗ್ಗಗಳೂ ಇವುಗಳೇ.

38ಆದರೆ ಗುಡಾರದ ಎದುರಿನಲ್ಲಿ ಪೂರ್ವದಿಕ್ಕಿಗೆ ಅಂದರೆ ಸಭೆಯ ಗುಡಾರದ ಮುಂದೆ ಪೂರ್ವದಿಕ್ಕಿಗೆ ಇಳುಕೊಳ್ಳುವವರು ಮೋಶೆಯೂ ಆರೋನನೂ ಅವನ ಕುಮಾರರೂ. ಇವರು ಇಸ್ರಾಯೇಲ್‌ ಮಕ್ಕಳಿಗಾಗಿ ಪರಿಶುದ್ಧಸ್ಥಳದ ಅಪ್ಪಣೆಯನ್ನು ಕಾಪಾ ಡುವವರು. ಪರಕೀಯನು ಸವಿಾಪಿಸಿದರೆ ಅವನು ಸಾಯಬೇಕು.

39ಮೋಶೆಯೂ ಆರೋನನೂ ಕರ್ತನ ಆಜ್ಞೆಯ ಪ್ರಕಾರ ಕುಟುಂಬಗಳ ಮೇರೆಗೆ ಲೆಕ್ಕ ಮಾಡಿದ ಎಲ್ಲಾ ಲೇವಿಯರು ಒಂದು ತಿಂಗಳು ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳ ಗಂಡಸರೆಲ್ಲರು ಲೆಕ್ಕದ ಪ್ರಕಾರ ಇಪ್ಪತ್ತೆರಡು ಸಾವಿರ ಮಂದಿ.

40ಇದಲ್ಲದೆ ಕರ್ತನು ಮೋಶೆಗೆ ಹೇಳಿದ್ದೇನಂದರೆ--ಇಸ್ರಾಯೇಲ್‌ ಮಕ್ಕಳಲ್ಲಿರುವ ಚೊಚ್ಚಲು ಗಂಡಸರನ್ನೆಲ್ಲಾ ಅವರು ಒಂದು ತಿಂಗಳೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರ ಲೆಕ್ಕವನ್ನು ತೆಗೆದುಕೋ.

41ಇಸ್ರಾಯೇಲ್‌ ಮಕ್ಕಳಲ್ಲಿರುವ ಚೊಚ್ಚಲಾದವರೆ ಲ್ಲರಿಗೆ ಬದಲಾಗಿ ಲೇವಿಯರನ್ನೂ ಇಸ್ರಾಯೇಲ್‌ ಮಕ್ಕಳ ದನಗಳಲ್ಲಿರುವ ಸಕಲ ಚೊಚ್ಚಲಾದವುಗಳಿಗೆ ಬದಲಾಗಿ ಲೇವಿಯರ ದನಗಳನ್ನೂ ನನಗೋಸ್ಕರ ತೆಗೆದುಕೋ (ನಾನೇ ಕರ್ತನು) ಎಂದು ಹೇಳಿದನು.

ಅರಣ್ಯಕಾಂಡ 3 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी