ನೀವು ನನಗೆ ಜನರಾಗಿರುವಿರಿ; ನಾನು ನಿಮಗೆ ದೇವರಾಗಿರುವೆನು.
20ಅವರ ಮಕ್ಕಳು ಸಹ ಪೂರ್ವ ಕಾಲದ ಹಾಗೆ ಇರುವರು; ಅವರ ಸಭೆಯು ನನ್ನ ಮುಂದೆ ಸ್ಥಾಪಿಸಲ್ಪಡುವದು; ಅವರನ್ನು ಬಾಧಿಸುವವರೆಲ್ಲರನ್ನು ವಿಚಾರಿಸುವೆನು.
21ಅವರ ಪ್ರಧಾನರು ಅವರೊಳಗೆ ಇರುವರು; ಅವರನ್ನಾಳುವವನು ಅವರ ಮಧ್ಯದಲ್ಲಿಂದ ಹೊರಡುವನು; ನಾನು ಅವನನ್ನು ಹತ್ತಿರ ಬರಮಾಡು ವೆನು; ಅವನು ನನಗೆ ಸವಿಾಪಿಸುವನು; ಆದರೆ ನನಗೆ ಸವಿಾಪಿಸುವದಕ್ಕೆ ತನ್ನ ಹೃದಯ ನಿಶ್ಚಯ ಮಾಡಿಕೊಂಡ ಇವನಾರೆಂದು ಕರ್ತನು ಅನ್ನುತ್ತಾನೆ.
22ನೀವು ನನಗೆ ಜನರಾಗಿರುವಿರಿ; ನಾನು ನಿಮಗೆ ದೇವರಾಗಿರುವೆನು.
23ಇಗೋ, ಕರ್ತನ ಬಿರುಗಾಳಿ ರೌದ್ರವಾಗಿ ಹೊರ ಡುತ್ತದೆ. ಅದು ಬಡಕೊಂಡು ಹೋಗುವ ಬಿರುಗಾಳಿ ಯೇ; ಬಾಧೆಯು ದುಷ್ಟರ ತಲೆಯ ಮೇಲೆ ಬೀಳುವದು.
24ಕರ್ತನ ಕೋಪದ ಉರಿಯು ಅದನ್ನು ಮಾಡುವ ವರೆಗೂ ತನ್ನ ಹೃದಯದ ಆಲೋಚನೆಗಳನ್ನು ನಡಿಸಿ ರುವ ವರೆಗೂ ತಿರುಗುವದಿಲ್ಲ; ನೀವು ಅಂತ್ಯದಿನದಲ್ಲಿ ಅದನ್ನು ಯೋಚಿಸುವಿರಿ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ