ಆದರೆ ಅವರು ಆಲಸ್ಯಮಾಡುತ್ತಿರು ವಾಗ ಏಹೂದನು ತಪ್ಪಿಸಿಕೊಂಡು ಕಲ್ಲುಗಣಿಗಳನ್ನು ದಾಟಿ ಸೆಯಾರಾವನ್ನು ಸೇರಿ ತಪ್ಪಿಸಿಕೊಂಡನು.
24ಅವನು ಹೋದ ತರುವಾಯ ಸೇವಕರು ಕೊಠಡಿಯ ಬಾಗಲು ಮುಚ್ಚಲ್ಪ ಟ್ಟಿರುವದನ್ನು ಕಂಡಾಗ--ಅರಸನು ನಿಶ್ಚಯವಾಗಿ ತನ್ನ ಬೇಸಿಗೆಯ ಕೊಠಡಿಯಲ್ಲಿ ವಿಶ್ರಾಂತಿ ತೆಗೆದುಕೊಳ್ಳು ತ್ತಿದ್ದಾನೆಂದು ಅಂದುಕೊಂಡು
25ಅವರು ತಮಗೆ ನಾಚಿಕೆ ಯಾಗುವ ಮಟ್ಟಿಗೂ ಕಾದಿದ್ದರು. ಆದರೆ ಇಗೋ, ಅವನು ಕೊಠಡಿಯ ಬಾಗಿಲನ್ನು ತೆರೆಯದೆ ಇದ್ದದರಿಂದ ಅವರು ಬೀಗದ ಕೈಯನ್ನು ತೆಗೆದುಕೊಂಡು ಬಾಗಲನ್ನು ತೆರೆದರು, ಇಗೋ, ಅವರ ಪ್ರಭುವು ನೆಲದ ಮೇಲೆ ಸತ್ತು ಬಿದ್ದಿದ್ದನು.
26ಆದರೆ ಅವರು ಆಲಸ್ಯಮಾಡುತ್ತಿರು ವಾಗ ಏಹೂದನು ತಪ್ಪಿಸಿಕೊಂಡು ಕಲ್ಲುಗಣಿಗಳನ್ನು ದಾಟಿ ಸೆಯಾರಾವನ್ನು ಸೇರಿ ತಪ್ಪಿಸಿಕೊಂಡನು.
27ಅವನು ಅಲ್ಲಿ ಬಂದಾಗ ಎಫ್ರಾಯಾಮಿನ ಬೆಟ್ಟದಲ್ಲಿ ತುತೂರಿಯನ್ನು ಊದಿದನು. ಆಗ ಇಸ್ರಾಯೇಲ್ ಮಕ್ಕಳು ಅವನ ಸಂಗಡ ಬೆಟ್ಟದಿಂದ ಇಳಿದರು; ಅವನು ಇವರ ಮುಂದೆ ನಡೆದು
28ಅವರ ಸಂಗಡ--ನೀವು ನನ್ನ ಹಿಂದೆ ಬನ್ನಿರಿ; ಕರ್ತನು ನಿಮ್ಮ ಶತ್ರುಗಳಾದ ಮೋವಾಬ್ಯರನ್ನು ನಿಮ್ಮ ಕೈಯಲ್ಲಿ ಒಪ್ಪಿಸಿಕೊಟ್ಟನು ಎಂದು ಅಂದನು. ಅವರು ಅವನ ಹಿಂದೆ ಬಂದು ಮೋವಾಬ್ಯ ರಿಗೆ ಎದುರಾದ ಯೊರ್ದನಿನ ರೇವುಗಳನ್ನು ಹಿಡಿದು ಒಬ್ಬರನ್ನಾದರೂ ದಾಟಗೊಡದೆ
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ