ಅರಣ್ಯಕಾಂಡ 35:7

ನೀವು ಲೇವಿಯರಿಗೆ ಕೊಡಬೇಕಾದ ಸಮಸ್ತ ಪಟ್ಟಣಗಳು ಅವುಗಳ ಉಪ ನಗರಗಳ ಸಂಗಡ ನಾಲ್ವತ್ತೆಂಟು ಪಟ್ಟಣಗಳಾಗಿರಬೇಕು.

ಸಂದರ್ಭದೊಂದಿಗೆ ಓದಿ · ಅರಣ್ಯಕಾಂಡ 35

5ನೀವು ಪಟ್ಟಣದ ಹೊರಗೆ ಪೂರ್ವ ಕಡೆಯಲ್ಲಿ ಎರಡು ಸಾವಿರ ಮೊಳ, ದಕ್ಷಿಣ ಕಡೆಯಲ್ಲಿ ಎರಡು ಸಾವಿರ ಮೊಳ, ಪಶ್ಚಿಮ ಕಡೆಯಲ್ಲಿ ಎರಡು ಸಾವಿರ ಮೊಳ, ಉತ್ತರ ಕಡೆಯಲ್ಲಿ ಎರಡು ಸಾವಿರ ಮೊಳ ಅಳೆಯಬೇಕು; ಮಧ್ಯದಲ್ಲಿ ಪಟ್ಟಣವಿರಬೇಕು; ಹೀಗೆ ಅವರ ಪಟ್ಟಣಗಳ ಉಪನಗರಗಳು ಇರಬೇಕು.

6ನೀವು ಲೇವಿಯರಿಗೆ ಕೊಡುವ ಪಟ್ಟಣಗಳೊಳಗೆ ಮನುಷ್ಯಹತ್ಯಮಾಡಿದ ವನು ಓಡುವಹಾಗೆ ಆರು ಆಶ್ರಯದ ಪಟ್ಟಣಗಳನ್ನು ನೇಮಿಸಬೇಕು; ಅವುಗಳ ಹೊರತು ನೀವು ನಾಲ್ವತ್ತೆರಡು ಪಟ್ಟಣಗಳನ್ನು ಕೊಡಬೇಕು.

7ನೀವು ಲೇವಿಯರಿಗೆ ಕೊಡಬೇಕಾದ ಸಮಸ್ತ ಪಟ್ಟಣಗಳು ಅವುಗಳ ಉಪ ನಗರಗಳ ಸಂಗಡ ನಾಲ್ವತ್ತೆಂಟು ಪಟ್ಟಣಗಳಾಗಿರಬೇಕು.

8ನೀವು ಇಸ್ರಾಯೇಲ್‌ ಮಕ್ಕಳ ಸ್ವಾಸ್ತ್ಯದಿಂದ ಕೊಡುವ ಪಟ್ಟಣಗಳನ್ನು ಹೆಚ್ಚಾದವರ ಕಡೆಯಿಂದ ಹೆಚ್ಚಾಗಿ ತಕ್ಕೊಳ್ಳಬೇಕು; ಕಡಿಮೆಯಾದವರ ಕಡೆಯಿಂದ ಕಡಿಮೆಯಾಗಿ ತಕ್ಕೊಳ್ಳಬೇಕು; ಒಬ್ಬೊಬ್ಬನು ತಾನು ಹೊಂದುವ ಸ್ವಾಸ್ತ್ಯಕ್ಕನುಸಾರವಾಗಿ ತನ್ನ ಪಟ್ಟಣ ಗಳೊಳಗಿಂದ ಲೇವಿಯರಿಗೆ ಕೊಡಬೇಕು ಎಂದು ಹೇಳಿದನು.

9ಕರ್ತನು ಮೋಶೆಯ ಸಂಗಡ ಮಾತನಾಡಿ--

ಅರಣ್ಯಕಾಂಡ 35 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी