ಇಬ್ರಿಯರಿಗೆ 9:6

ಇವುಗಳು ಹೀಗೆ ನೇಮಕ ಮಾಡಲ್ಪಟ್ಟಾಗ ಯಾಜಕರು ಯಾವಾಗಲೂ ದೇವರ ಸೇವೆಯನ್ನು ಪೂರೈಸುವವರಾಗಿ ಗುಡಾರದ ಮೊದಲನೆಯ ಭಾಗದೊಳಗೆ ಪ್ರವೇಶಿಸುವರು.

ಸಂದರ್ಭದೊಂದಿಗೆ ಓದಿ · ಇಬ್ರಿಯರಿಗೆ 9

4ಅದರಲ್ಲಿ ಚಿನ್ನದ ಧೂಪಾರತಿ, ಒಳಗೂ ಹೊರಗೂ ಚಿನ್ನದಿಂದ ಹೊದಿಸಿದ್ದ ಒಡಂಬಡಿಕೆಯ ಮಂಜೂಷ ಇವುಗಳಿದ್ದವು; ಆ ಮಂಜೂಷದೊಳಗೆ ಮನ್ನಾ ಇಟ್ಟಿದ್ದ ಚಿನ್ನದ ಪಾತ್ರೆಯೂ ಆರೋನನ ಚಿಗುರಿದ ಕೋಲೂ ಒಡಂಬಡಿಕೆಯ ಕಲ್ಲಿನ ಹಲಿಗೆ ಗಳೂ ಇದ್ದವು;

5ಅದರ ಮೇಲೆ ಪ್ರಭಾವದ ಕೆರೂಬಿ ಯರು ಕೃಪಾಸನವನ್ನು ಮುಚ್ಚಿಕೊಂಡಿದ್ದರು. ಸದ್ಯಕ್ಕೆ ಈ ವಿಷಯಗಳನ್ನು ಪ್ರತ್ಯೇಕವಾಗಿ ನಾವು ವಿವರಿಸು ವದಕ್ಕೆ ಆಗುವದಿಲ್ಲ.

6ಇವುಗಳು ಹೀಗೆ ನೇಮಕ ಮಾಡಲ್ಪಟ್ಟಾಗ ಯಾಜಕರು ಯಾವಾಗಲೂ ದೇವರ ಸೇವೆಯನ್ನು ಪೂರೈಸುವವರಾಗಿ ಗುಡಾರದ ಮೊದಲನೆಯ ಭಾಗದೊಳಗೆ ಪ್ರವೇಶಿಸುವರು.

7ಆದರೆ ಎರಡನೆಯ ಭಾಗದೊಳಗೆ ಮಹಾಯಾಜಕನೊಬ್ಬನೇ ವರುಷಕ್ಕೆ ಒಂದೇ ಸಾರಿ ಹೋಗುತ್ತಾನೆ. ಅವನು ರಕ್ತವನ್ನು ತಕ್ಕೊಳ್ಳದೆ ಹೋಗುವದಿಲ್ಲ; ಆ ರಕ್ತವನ್ನು ತನ ಗೋಸ್ಕರವೂ ಜನರ ತಪ್ಪುಗಳಿಗೋಸ್ಕರವೂ ಸಮರ್ಪಿಸುತ್ತಾನೆ.

8ಮೊದಲನೆಯ ಗುಡಾರವು ಇನ್ನೂ ಇರುವ ತನಕ ಅತಿ ಪರಿಶುದ್ಧ ಸ್ಥಳಕ್ಕೆ ಹೋಗುವ ಮಾರ್ಗವು ಇದುವರೆಗೂ ಪ್ರಕಟವಾಗಿಲ್ಲಿವೆಂಬದನ್ನು ಪವಿತ್ರಾತ್ಮನು ವ್ಯಕ್ತಪಡಿಸುತ್ತಾನೆ.

ಇಬ್ರಿಯರಿಗೆ 9 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी