ಯಾಜಕಕಾಂಡ 5:9

ಇದಲ್ಲದೆ ಅವನು ಪಾಪದ ಬಲಿಯ ರಕ್ತವನ್ನು ಯಜ್ಞವೇದಿಯ ಬದಿಯಲ್ಲಿ ಚಿಮುಕಿಸಬೇಕು. ಉಳಿದ ರಕ್ತವನ್ನು ಯಜ್ಞವೇದಿಯ ಬದಿಯಲ್ಲಿ ಹಿಂಡಬೇಕು; ಅದು ಪಾಪದ ಬಲಿಯಾಗಿದೆ.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 5

7ಅವನು ಒಂದು ಕುರಿಮರಿಯನ್ನು ತರುವದಕ್ಕೆ ಅಶಕ್ತನಾಗಿದ್ದರೆ ತಾನು ಮಾಡಿದ ಅಪರಾಧಕ್ಕಾಗಿ ಎರಡು ಬೆಳವಗಳನ್ನಾಗಲಿ ಇಲ್ಲವೆ ಎರಡು ಪಾರಿವಾಳದ ಮರಿ ಗಳನ್ನಾಗಲಿ ಕರ್ತನಿಗೆ ತರಬೇಕು; ಒಂದನ್ನು ಪಾಪದ ಬಲಿಗಾಗಿ ಮತ್ತೊಂದನ್ನು ದಹನಬಲಿಗಾಗಿ ತರಬೇಕು.

8ಅವನು ಅವುಗಳನ್ನು ಯಾಜಕರ ಬಳಿಗೆ ತಂದಾಗ ಪಾಪದ ಬಲಿಗೆ ತಂದಿರುವದನ್ನು ಮೊದಲು ಸಮರ್ಪಿಸಿ ಅದರ ತಲೆಯನ್ನು ಕುತ್ತಿಗೆಯಿಂದ ಮುರಿಯಬೇಕು, ಅದನ್ನು ವಿಭಾಗಿಸಬಾರದು.

9ಇದಲ್ಲದೆ ಅವನು ಪಾಪದ ಬಲಿಯ ರಕ್ತವನ್ನು ಯಜ್ಞವೇದಿಯ ಬದಿಯಲ್ಲಿ ಚಿಮುಕಿಸಬೇಕು. ಉಳಿದ ರಕ್ತವನ್ನು ಯಜ್ಞವೇದಿಯ ಬದಿಯಲ್ಲಿ ಹಿಂಡಬೇಕು; ಅದು ಪಾಪದ ಬಲಿಯಾಗಿದೆ.

10ಅವನು ಕ್ರಮದ ಪ್ರಕಾರ ಎರಡನೆಯದನ್ನು ದಹನ ಬಲಿಯಾಗಿ ಸಮರ್ಪಿಸಬೇಕು; ಅವನು ಮಾಡಿದ ಪಾಪಕ್ಕಾಗಿ ಯಾಜಕನು ಪ್ರಾಯಶ್ಚಿತ್ತಮಾಡಬೇಕು. ಆಗ ಅದು ಅವನಿಗೆ ಕ್ಷಮಿಸಲ್ಪಡುವದು.

11ಆದರೆ ಅವನು ಎರಡು ಬೆಳವಗಳನ್ನಾಗಲಿ ಇಲ್ಲವೆ ಎರಡು ಪಾರಿವಾಳದ ಮರಿಗಳನ್ನಾಗಲಿ ತರುವದಕ್ಕೆ ಅಶಕ್ತನಾಗಿದ್ದರೆ ಪಾಪಮಾಡಿದವನು ತನ್ನ ಸಮರ್ಪಣೆ ಗಾಗಿ ಒಂದು ಎಫದ ಹತ್ತನೆಯ ಭಾಗದಷ್ಟು ನಯ ವಾದ ಹಿಟ್ಟನ್ನು ಪಾಪದ ಬಲಿಗಾಗಿ ತರಬೇಕು. ಅವನು ಅದರ ಮೇಲೆ ಎಣ್ಣೆಯನ್ನು ಇಲ್ಲವೆ ಸಾಂಬ್ರಾಣಿಯನ್ನು ಹಾಕಬಾರದು. ಅದು ಪಾಪದ ಬಲಿಯಾಗಿದೆ.

ಯಾಜಕಕಾಂಡ 5 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी