೨ ಅರಸುಗಳು 9:16

ಆಗ ಯೇಹುವು -- ನಿಮಗೆ ಮನಸ್ಸಾದರೆ ಹೋಗಿ ಇದನ್ನು ಇಜ್ರೇಲಿನಲ್ಲಿ ತಿಳಿಸಲು ಪಟ್ಟಣ ದಿಂದ ಯಾರೂ ತಪ್ಪಿಸಿಕೊಂಡು ಹೊರಡದೆ ಇರಲಿ ಅಂದನು. ಯೇಹುವು ರಥದ ಮೇಲೆ ಏರಿ ಇಜ್ರೇಲಿಗೆ ಹೋದನು. ಯಾಕಂದರೆ ಯೋರಾಮನು ಅಲ್ಲಿ ಬಿದ್ದಿದ್ದನು. ಇದಲ್ಲದೆ ಯೋರಾಮನನ್ನು ನೋಡು ವದಕ್ಕೆ ಯೆಹೂದದ ಅರಸನಾದ ಅಹಜ್ಯನು ಅಲ್ಲಿಗೆ ಬಂದಿದ್ದನು.

ಸಂದರ್ಭದೊಂದಿಗೆ ಓದಿ · ೨ ಅರಸುಗಳು 9

14ಹೀಗೆ ನಿಂಷಿಯ ಮಗನಾಗಿ ರುವ ಯೆಹೋಷಾಫಾಟನ ಮಗನಾದ ಯೇಹುವು ಯೆಹೋರಾಮನಿಗೆ ವಿರೋಧವಾಗಿ ಒಳಸಂಚು ಮಾಡಿ ದನು. ಅರಾಮ್ಯರ ಅರಸನಾದ ಹಜಾಯೇಲನ ನಿಮಿತ್ತ ಯೆಹೋರಾಮನೂ ಎಲ್ಲಾ ಇಸ್ರಾಯೇಲ್ಯರೂ ಗಿಲ್ಯಾ ದಿನ ರಾಮೋತಿನಲ್ಲಿ ಕಾಯುತ್ತಾ ಇದ್ದರು.

15ಆದರೆ ಅರಸನಾದ ಯೋರಾಮನು ಅರಾಮ್ಯರ ಅರಸನಾದ ಹಜಾಯೇಲನ ಸಂಗಡ ಯುದ್ಧಮಾಡುವಾಗ ಅರಾ ಮ್ಯರು ತನ್ನನ್ನು ಹೊಡೆದ ಗಾಯಗಳನ್ನು ಸ್ವಸ್ಥಮಾಡಿ ಕೊಳ್ಳುವ ನಿಮಿತ್ತ ಇಜ್ರೇಲಿಗೆ ಹೋಗಿದ್ದನು.

16ಆಗ ಯೇಹುವು -- ನಿಮಗೆ ಮನಸ್ಸಾದರೆ ಹೋಗಿ ಇದನ್ನು ಇಜ್ರೇಲಿನಲ್ಲಿ ತಿಳಿಸಲು ಪಟ್ಟಣ ದಿಂದ ಯಾರೂ ತಪ್ಪಿಸಿಕೊಂಡು ಹೊರಡದೆ ಇರಲಿ ಅಂದನು. ಯೇಹುವು ರಥದ ಮೇಲೆ ಏರಿ ಇಜ್ರೇಲಿಗೆ ಹೋದನು. ಯಾಕಂದರೆ ಯೋರಾಮನು ಅಲ್ಲಿ ಬಿದ್ದಿದ್ದನು. ಇದಲ್ಲದೆ ಯೋರಾಮನನ್ನು ನೋಡು ವದಕ್ಕೆ ಯೆಹೂದದ ಅರಸನಾದ ಅಹಜ್ಯನು ಅಲ್ಲಿಗೆ ಬಂದಿದ್ದನು.

17ಇಜ್ರೇಲಿನ ಬುರುಜಿನ ಮೇಲೆ ಕಾವಲು ಗಾರನು ನಿಂತಿದ್ದನು. ಇವನು ಬರುವ ಯೇಹುವಿನ ಗುಂಪನ್ನು ಕಂಡು--ನಾನು ಗುಂಪನ್ನು ನೋಡುತ್ತೇನೆ ಅಂದನು. ಅದಕ್ಕೆ ಯೋರಾಮನು ರಾಹುತನನ್ನು ಕರೆದು ಅವರಿಗೆ ಎದುರಾಗಿ ಕಳುಹಿಸಿ--ಸಮಾಧಾ ನವೋ ಎಂದು ಕೇಳಲಿ ಅಂದನು.

18ಆದದರಿಂದ ಒಬ್ಬನು ಕುದುರೆಯನ್ನು ಹತ್ತಿ ಅವನಿಗೆ ಎದುರಾಗಿ ಹೋಗಿ--ಸಮಾಧಾನವೋ ಎಂದು ಅರಸನು ಕೇಳು ತ್ತಾನೆ ಅಂದನು. ಅದಕ್ಕೆ ಯೇಹುವು--ಸಮಾಧಾನ ನಿನಗೆ ಏನು? ನನ್ನ ಹಿಂದಕ್ಕೆ ಹೋಗು ಅಂದನು. ಆಗ ಕಾವಲುಗಾರನು -- ಸೇವಕನು ಅವರ ಬಳಿಗೆ ಹೋಗಿ ತಿರಿಗಿ ಬರಲಿಲ್ಲ ಅಂದನು.

೨ ಅರಸುಗಳು 9 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी