ಇಷಯನು ಶಮ್ಮನನ್ನು ಬರಮಾಡಿದನು; ಆದರೆ ಅವನು--ಇವನನ್ನು ಕರ್ತನು ಆದುಕೊಳ್ಳಲಿಲ್ಲ ಅಂದನು.
7ಆದರೆ ಕರ್ತನು ಸಮುವೇಲನಿಗೆ--ನೀನು ಅವನ ರೂಪವನ್ನೂ ಅವನ ದೇಹದ ಉದ್ದವನ್ನೂ ದೃಷ್ಟಿಸಬೇಡ; ಅವನನ್ನು ನಾನು ತಿರಸ್ಕರಿಸಿದೆನು; ಕರ್ತನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ಮಾತ್ರ ನೋಡದೆ ಹೃದಯವನ್ನೇ ನೋಡುವನು ಅಂದನು.
8ಆಗ ಇಷಯನು ಅಬೀನಾ ದಾಬನನ್ನು ಕರೆದು ಅವನನ್ನು ಸಮುವೇಲನ ಮುಂದೆ ಬರಮಾಡಿದನು; ಆದರೆ ಅವನು--ಇವನನ್ನು ಕರ್ತನು ಆದುಕೊಳ್ಳಲಿಲ್ಲ ಅಂದನು.
9ಇಷಯನು ಶಮ್ಮನನ್ನು ಬರಮಾಡಿದನು; ಆದರೆ ಅವನು--ಇವನನ್ನು ಕರ್ತನು ಆದುಕೊಳ್ಳಲಿಲ್ಲ ಅಂದನು.
10ಅನಂತರ ಇಷಯನು ತನ್ನ ಏಳುಮಂದಿ ಕುಮಾರರನ್ನು ಸಮುವೇಲನ ಮುಂದೆ ಬರಮಾಡಿದನು; ಆದರೆ ಸಮುವೇಲನು ಇಷಯ ನಿಗೆ--ಕರ್ತನು ಇವರಲ್ಲಿ ಒಬ್ಬನನ್ನಾದರೂ ಆದುಕೊಳ್ಳ ಲಿಲ್ಲ ಅಂದನು.
11ಸಮುವೇಲನು--ನಿನಗಿರುವ ಮಕ್ಕ ಳೆಲ್ಲಾ ಇಷ್ಟೇ ಮಂದಿಯೋ? ಎಂದು ಇಷಯನನ್ನು ಕೇಳಿದನು. ಅದಕ್ಕವನು--ಇವರೆಲ್ಲರಿಗಿಂತಲೂ ಚಿಕ್ಕವ ನೊಬ್ಬನು ಉಳಿದಿದ್ದಾನೆ; ಇಗೋ, ಅವನು ಕುರಿಗಳನ್ನು ಕಾಯುತ್ತಾ ಇದ್ದಾನೆ ಅಂದನು. ಆಗ ಸಮುವೇಲನು ಇಷಯನಿಗೆ--ಅವನನ್ನು ಕರೆಯ ಕಳುಹಿಸು; ಯಾಕಂದರೆ ಅವನು ಇಲ್ಲಿಗೆ ಬರುವವರೆಗೆ ನಾವು ಕೂತುಕೊಳ್ಳಬಾರದು ಅಂದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ