೨ ಸಮುವೇಲನು 16:4

ಆಗ ಅರಸನು ಚೀಬನಿಗೆ--ಇಗೋ, ಮೆಫೀಬೋಶೆತನಿಗೆ ಉಂಟಾದದ್ದೆಲ್ಲಾ ನಿನ್ನದಾಯಿತು ಅಂದನು. ಅದಕ್ಕೆ ಚೀಬನು--ಅರಸನಾದ ನನ್ನ ಒಡೆ ಯನೇ, ನಿನ್ನ ದೃಷ್ಟಿಯಲ್ಲಿ ನನಗೆ ದಯೆದೊರಕಲಿ ಎಂದು ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ ಅಂದನು.

ಸಂದರ್ಭದೊಂದಿಗೆ ಓದಿ · ೨ ಸಮುವೇಲನು 16

2ಅರಸನು ಚೀಬನಿಗೆ--ಇವು ಯಾಕೆ ಅಂದನು. ಅದಕ್ಕೆ ಚೀಬನು--ಕತ್ತೆಗಳು ಅರಸನ ಮನೆಯವರು ಹತ್ತುವದಕ್ಕೂ ಆ ರೊಟ್ಟಿಗಳೂ ವಸಂತಕಾಲದ ಫಲಗಳೂ ಯೌವನಸ್ಥರು ತಿನ್ನುವ ದಕ್ಕೂ ದ್ರಾಕ್ಷಾರಸವು ಅರಣ್ಯದಲ್ಲಿ ದಣಿದವರು ಕುಡಿಯುವದಕ್ಕೂ ಅಂದನು.

3ಆಗ ಅರಸನು ಅವ ನನ್ನು--ನಿನ್ನ ಯಜಮಾನನ ಕುಮಾರನು ಎಲ್ಲಿದ್ದಾ ನೆಂದು ಕೇಳಿದನು. ಚೀಬನು ಅರಸನಿಗೆ--ಇಗೋ, ಅವನು ಯೆರೂಸಲೇಮಿನಲ್ಲಿದ್ದಾನೆ. ಯಾಕಂದರೆ--ಈ ಹೊತ್ತು ಇಸ್ರಾಯೇಲಿನ ಮನೆಯವರು ನನ್ನ ತಂದೆಯ ರಾಜ್ಯವನ್ನು ನನಗೆ ತಿರಿಗಿಕೊಡುವರೆಂದು ಅಂದನು.

4ಆಗ ಅರಸನು ಚೀಬನಿಗೆ--ಇಗೋ, ಮೆಫೀಬೋಶೆತನಿಗೆ ಉಂಟಾದದ್ದೆಲ್ಲಾ ನಿನ್ನದಾಯಿತು ಅಂದನು. ಅದಕ್ಕೆ ಚೀಬನು--ಅರಸನಾದ ನನ್ನ ಒಡೆ ಯನೇ, ನಿನ್ನ ದೃಷ್ಟಿಯಲ್ಲಿ ನನಗೆ ದಯೆದೊರಕಲಿ ಎಂದು ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ ಅಂದನು.

5ಅರಸನಾದ ದಾವೀದನು ಬಹುರೀಮಿನ ವರೆಗೂ ಬಂದಾಗ ಇಗೋ, ಸೌಲನ ಗೋತ್ರದವನಾದಂಥ ಗೇರನ ಮಗನಾದ ಶಿಮ್ಮಿಯೆಂಬ ಹೆಸರುಳ್ಳ ಒಬ್ಬ ಮನುಷ್ಯನು ಅಲ್ಲಿಂದ ಹೊರಟು ದೂಷಿಸುತ್ತಾ ನಡೆದು ಬಂದನು.

6ಎಲ್ಲಾ ಜನರೂ ಎಲ್ಲಾ ಪರಾಕ್ರಮಶಾಲಿ ಗಳೂ ದಾವೀದನ ಬಲ ಮತ್ತು ಎಡ ಪಾರ್ಶ್ವಗಳಲ್ಲಿ ರುವಾಗ ಅವನು ಅರಸನಾದ ದಾವೀದನ ಮೇಲೆಯೂ ಅವನ ಎಲ್ಲಾ ಊಳಿಗದವರ ಮೇಲೆಯೂ ಕಲ್ಲುಗಳನ್ನು ಎಸೆದನು.

೨ ಸಮುವೇಲನು 16 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी