ಯೆಹೋಶುವ 17:1

ಇದಲ್ಲದೆ ಮನಸ್ಸೆಯ ಗೋತ್ರಕ್ಕೂ ಭಾಗಸಿಕ್ಕಿತು. ಯಾಕಂದರೆ ಅವನು ಯೋಸೇಫ ನಿಗೆ ಚೊಚ್ಚಲ ಮಗನಾಗಿದ್ದನು. ಮನಸ್ಸೆಯ ಹಿರಿಯ ಮಗನಾದ ಗಿಲ್ಯಾದನ ತಂದೆಯಾದ ಮಾಕೀರನು ಶೂರನಾದದರಿಂದ ಗಿಲ್ಯಾದು ಬಾಷಾನು ಅವನ ಪಾಲಿಗೆ ಬಂದವು;

ಸಂದರ್ಭದೊಂದಿಗೆ ಓದಿ · ಯೆಹೋಶುವ 17

1ಇದಲ್ಲದೆ ಮನಸ್ಸೆಯ ಗೋತ್ರಕ್ಕೂ ಭಾಗಸಿಕ್ಕಿತು. ಯಾಕಂದರೆ ಅವನು ಯೋಸೇಫ ನಿಗೆ ಚೊಚ್ಚಲ ಮಗನಾಗಿದ್ದನು. ಮನಸ್ಸೆಯ ಹಿರಿಯ ಮಗನಾದ ಗಿಲ್ಯಾದನ ತಂದೆಯಾದ ಮಾಕೀರನು ಶೂರನಾದದರಿಂದ ಗಿಲ್ಯಾದು ಬಾಷಾನು ಅವನ ಪಾಲಿಗೆ ಬಂದವು;

2ಮನಸ್ಸೆಯ ಉಳಿದ ಮಕ್ಕಳಾದ ಅಬೀಯೇಜೆರಿನ ಮಕ್ಕಳಿಗೂ ಹೇಲೆಕನ ಮಕ್ಕಳಿಗೂ ಅಸ್ರೀಯೇಲನ ಮಕ್ಕಳಿಗೂ ಶೆಕೆಮನ ಮಕ್ಕಳಿಗೂ ಹೇಫೆರನ ಮಕ್ಕಳಿಗೂ ಶೆವಿಾದನನ ಮಕ್ಕಳಿಗೂ ಅವರ ಕುಟುಂಬಗಳಿಗೆ ತಕ್ಕ ಬಾಧ್ಯತೆ ಉಂಟಾಯಿತು. ಇವರು ತಮ್ಮ ಕುಟುಂಬಗಳ ಪ್ರಕಾರ ಯೋಸೇಫನ ಮಗ ನಾದ ಮನಸ್ಸೆಯ ಗಂಡು ಮಕ್ಕಳಾಗಿದ್ದವರು.

3ಆದರೆ ಮನಸ್ಸೆಗೆ ಹುಟ್ಟಿದ ಮಾಕೀರನ ಮರಿಮಗನೂ ಗಿಲ್ಯಾ ದನ ಮೊಮ್ಮಗನೂ ಹೇಫೆರನ ಮಗನಾದ ಚಲ್ಪಹಾದನಿಗೆ ಕುಮಾರರಿಲ್ಲ; ಆದರೆ ಮಹ್ಲಾ, ನೋವಾ, ಹೋಗ್ಲಾ, ಮಿಲ್ಕಾ, ತಿರ್ಚಾ ಎಂಬ ಹೆಸರುಳ್ಳ ಕುಮಾರ್ತೆ ಯರಿದ್ದರು.

ಯೆಹೋಶುವ 17 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी