೧ ಅರಸುಗಳು 20:40

ಆದರೆ ನಿನ್ನ ಸೇವಕನು ಅಲ್ಲಿ ಇಲ್ಲಿ ಕೆಲಸ ಮಾಡುತ್ತಿರುವಾಗ ಅವನು ಇಲ್ಲದೆ ಹೋದನು ಅಂದನು. ಇಸ್ರಾಯೇಲಿನ ಅರ ಸನು ಅವನಿಗೆ--ನಿನ್ನ ತೀರ್ಪಿನ ಹಾಗೆಯೇ ಆಗು ವದು; ನೀನೇ ನಿರ್ಣಯಿಸಿದಿ ಅಂದನು.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 20

38ಆಗ ಪ್ರವಾದಿಯು ಹೋಗಿ ತನ್ನ ಮುಖದ ಮೇಲೆ ಬೂದಿ ಯನ್ನು ಹಚ್ಚಿಕೊಂಡು ಮುಖ ಮರೆಮಾಡಿ ಅರಸನಿ ಗೋಸ್ಕರ ಮಾರ್ಗದಲ್ಲಿ ಕಾದುಕೊಂಡಿದ್ದನು.

39ಅರ ಸನು ಹಾದು ಹೋಗುತ್ತಿರುವಾಗ, ಇವನು ಅರಸನಿಗೆ ಕೂಗಿ ಹೇಳಿದ್ದೇನಂದರೆ--ನಿನ್ನ ಸೇವಕನು ಯುದ್ಧಕ್ಕೆ ಹೋಗಿರುವಾಗ ಇಗೋ, ಒಬ್ಬ ಮನುಷ್ಯನು ತೊಲಗಿ ಒಬ್ಬನನ್ನು ನನ್ನ ಬಳಿಗೆ ತಕ್ಕೊಂಡು ಬಂದು--ಈ ಮನುಷ್ಯನನ್ನು ಕಾಯಿ; ಇವನು ಹೇಗಾದರೂ ಇಲ್ಲದೆ ಹೋದರೆ ನಿನ್ನ ಪ್ರಾಣವು ಅವನ ಪ್ರಾಣಕ್ಕೆ ಬದ ಲಾಗಿರುವುದು; ಇಲ್ಲವೆ ನೀನು ಒಂದು ತಲಾಂತು ಬೆಳ್ಳಿಯನ್ನು ಕೊಡಬೇಕು ಅಂದನು.

40ಆದರೆ ನಿನ್ನ ಸೇವಕನು ಅಲ್ಲಿ ಇಲ್ಲಿ ಕೆಲಸ ಮಾಡುತ್ತಿರುವಾಗ ಅವನು ಇಲ್ಲದೆ ಹೋದನು ಅಂದನು. ಇಸ್ರಾಯೇಲಿನ ಅರ ಸನು ಅವನಿಗೆ--ನಿನ್ನ ತೀರ್ಪಿನ ಹಾಗೆಯೇ ಆಗು ವದು; ನೀನೇ ನಿರ್ಣಯಿಸಿದಿ ಅಂದನು.

41ಆಗ ಅವನು ಶೀಘ್ರವಾಗಿ ತನ್ನ ಕಣ್ಣುಗಳ ಮೇಲೆ ಇರುವ ಬೂದಿಯನ್ನು ಒರಸಿ ಹಾಕಿದ್ದರಿಂದ ಇಸ್ರಾಯೇಲಿನ ಅರಸನು ಅವನು ಪ್ರವಾದಿಗಳಲ್ಲಿ ಒಬ್ಬನೆಂದು ತಿಳು ಕೊಂಡನು.

42ಇವನು ಅವನಿಗೆ--ಕರ್ತನು ಹೇಳುವ ದೇನಂದರೆ--ನಾನು ಪೂರ್ಣನಾಶಕ್ಕೆ ಒಪ್ಪಿಸಿದ ಮನು ಷ್ಯನನ್ನು ನೀನು ಕೈಬಿಟ್ಟು ಹೋಗಗೊಡಿಸಿದ ಕಾರಣ ಅವನ ಪ್ರಾಣಕ್ಕೆ ಬದಲಾಗಿ ನಿನ್ನ ಪ್ರಾಣವೂ ಅವನ ಜನಕ್ಕೆ ಬದಲಾಗಿ ನಿನ್ನ ಜನವೂ ಹೋಗುವದು ಅಂದನು.

೧ ಅರಸುಗಳು 20 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी