ದೇವರು ನನ್ನನ್ನು ಭಕ್ತಿಹೀನರಿಗೆ ಒಪ್ಪಿಸುತ್ತಾನೆ. ದುಷ್ಟರ ಕೈಗೆ ನನ್ನನ್ನು ಕೊಟ್ಟುಬಿಡುತ್ತಾನೆ.
9ಆತನು ತನ್ನ ಕೋಪದಲ್ಲಿ ನನ್ನನ್ನು ಹರಿದುಬಿಡುತ್ತಾನೆ; ನನ್ನನ್ನು ಹಗೆಮಾಡುತ್ತಾನೆ. ತನ್ನ ಹಲ್ಲುಗಳನ್ನು ನನ್ನ ಮೇಲೆ ಕಡಿಯುತ್ತಾನೆ; ನನ್ನ ವೈರಿಯು ತನ್ನ ಕಣ್ಣುಗಳನ್ನು ನನ್ನ ಮೇಲೆ ಮಸೆಯುತ್ತಾನೆ.
10ನನ್ನ ಮೇಲೆ ತಮ್ಮ ಬಾಯಿ ತೆರೆಯುತ್ತಾರೆ; ನಿಂದೆಗಾಗಿ ನನ್ನ ಕೆನ್ನೆಗಳನ್ನು ಬಡಿಯುತ್ತಾರೆ. ಏಕವಾಗಿ ನನ್ನ ಮೇಲೆ ಕೂಡಿಕೊಳ್ಳುತ್ತಾರೆ.
11ದೇವರು ನನ್ನನ್ನು ಭಕ್ತಿಹೀನರಿಗೆ ಒಪ್ಪಿಸುತ್ತಾನೆ. ದುಷ್ಟರ ಕೈಗೆ ನನ್ನನ್ನು ಕೊಟ್ಟುಬಿಡುತ್ತಾನೆ.
12ನಾನು ಶಾಂತವಾಗಿದ್ದಾಗ ನನ್ನನ್ನು ಪುಡಿಪುಡಿ ಮಾಡಿದನು. ನನ್ನ ಕುತ್ತಿಗೆ ಹಿಡಿದು ಚೂರುಚೂರಾಗಿ ಮಾಡಿದನು; ನನ್ನನ್ನು ತನಗೆ ಗುರಿಯಾಗಿ ನಿಲ್ಲಿಸಿದನು;
13ಆತನ ಬಿಲ್ಲುಗಾರರು ನನ್ನನ್ನು ಸುತ್ತಿಕೊಂಡಿದ್ದಾರೆ; ನನ್ನ ಗುಂಡಿಗೆಗಳನ್ನು ಕಡಿಯುತ್ತಾನೆ. ಕರುಣಿಸುವದಿಲ್ಲ; ನನ್ನ ಪಿತ್ತವನ್ನು ಭೂಮಿಗೆ ಚೆಲ್ಲುತ್ತಾನೆ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ