೧ ಕೊರಿಂಥದವರಿಗೆ 2:14

ಪ್ರಾಕೃತ ಮನುಷ್ಯನು ದೇವರಾತ್ಮನ ವಿಷಯಗಳನ್ನು ಅಂಗೀಕರಿಸುವದಿಲ್ಲ; ಅವು ಅವನಿಗೆ ಹುಚ್ಚುತನವಾಗಿ ತೋರುತ್ತವೆ; ಇಲ್ಲವೆ ಅವು ಆತ್ಮವಿಚಾರದಿಂದ ತಿಳಿಯತಕ್ಕವುಗಳಾಗಿರಲಾಗಿ ಅವನು ಅವುಗಳನ್ನು ಗ್ರಹಿಸ ಲಾರನು.

ಸಂದರ್ಭದೊಂದಿಗೆ ಓದಿ · ೧ ಕೊರಿಂಥದವರಿಗೆ 2

12ನಾವು ಪ್ರಾಪಂಚಿಕ ಆತ್ಮವನ್ನು ಹೊಂದದೆ ದೇವರು ನಮಗೆ ಉಚಿತವಾಗಿ ದಯಪಾಲಿಸಿರುವವುಗಳನ್ನು ತಿಳುಕೊಳ್ಳು ವದಕ್ಕಾಗಿ ದೇವರ ಆತ್ಮನನ್ನೇ ಹೊಂದಿದೆವು.

13ಇವುಗಳನ್ನು ಮಾನುಷ್ಯಜ್ಞಾನವು ಕಲಿಸಿದ ಮಾತು ಗಳಿಂದ ಹೇಳದೆ ಪರಿಶುದ್ಧಾತ್ಮನು ಕಲಿಸಿಕೊಟ್ಟ ಮಾತುಗಳಿಂದ ಹೇಳಿ ಆತ್ಮ ಸಂಬಂಧವಾದವುಗಳನ್ನು ಆತ್ಮೀಕವಾದವುಗಳೊಂದಿಗೆ ಹೋಲಿಸುತ್ತೇವೆ.

14ಪ್ರಾಕೃತ ಮನುಷ್ಯನು ದೇವರಾತ್ಮನ ವಿಷಯಗಳನ್ನು ಅಂಗೀಕರಿಸುವದಿಲ್ಲ; ಅವು ಅವನಿಗೆ ಹುಚ್ಚುತನವಾಗಿ ತೋರುತ್ತವೆ; ಇಲ್ಲವೆ ಅವು ಆತ್ಮವಿಚಾರದಿಂದ ತಿಳಿಯತಕ್ಕವುಗಳಾಗಿರಲಾಗಿ ಅವನು ಅವುಗಳನ್ನು ಗ್ರಹಿಸ ಲಾರನು.

15ಆತ್ಮನಿಂದ ನಡಿಸಿಕೊಳ್ಳುವವನೋ ಎಲ್ಲವನ್ನು ವಿಚಾರಿಸಿ ತಿಳುಕೊಳ್ಳುತ್ತಾನೆ; ಆದರೆ ಇವನನ್ನು ಯಾವನೂ ವಿಚಾರಿಸಿ ತಿಳುಕೊಳ್ಳುವದಿಲ್ಲ.

16ಕರ್ತನ ಮನಸ್ಸನ್ನು ತಿಳಿದುಕೊಂಡು ಆತನಿಗೆ ಉಪದೇಶಿಸುವವನಾರು? ನಮಗಾದರೋ ಕ್ರಿಸ್ತನ ಮನಸ್ಸು ಇರುತ್ತದೆ.

೧ ಕೊರಿಂಥದವರಿಗೆ 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी