೨ ಅರಸುಗಳು 2:20

ಅದಕ್ಕ ವನು--ನನ್ನ ಬಳಿಗೆ ಹೊಸ ಗಡಿಗೆಯನ್ನು ತಕ್ಕೊಂಡು ಬಂದು ಅದರಲ್ಲಿ ಉಪ್ಪು ಹಾಕಿರಿ ಅಂದನು. ಅವರು ಅದನ್ನು ಅವನ ಬಳಿಗೆ ತಕ್ಕೊಂಡು ಬಂದರು.

ಸಂದರ್ಭದೊಂದಿಗೆ ಓದಿ · ೨ ಅರಸುಗಳು 2

18ಅವನು ಇನ್ನೂ ಯೆರಿಕೋವಿನಲ್ಲಿದ್ದಾಗ ಅವರು ತಿರುಗಿ ಅವನ ಬಳಿಗೆ ಬಂದರು. ಆಗ ಅವನು ಇವ ರಿಗೆ--ಹೋಗಬೇಡಿರೆಂದು ನಾನು ನಿಮಗೆ ಹೇಳ ಲಿಲ್ಲವೋ ಅಂದನು.

19ಆಗ ಆ ಪಟ್ಟಣದ ಜನರು ಎಲೀಷನಿಗೆ-- ಇಗೋ, ಈ ಪಟ್ಟಣದ ಸ್ಥಳವು ಒಳ್ಳೇದಾಗಿದೆ ಎಂದು ನಮ್ಮ ಒಡೆಯನು ನೋಡುತ್ತಾನೆ; ಆದರೆ ನೀರು ಕೆಟ್ಟದ್ದು, ಭೂಮಿ ಬಂಜೆಯಾದದ್ದು ಅಂದರು.

20ಅದಕ್ಕ ವನು--ನನ್ನ ಬಳಿಗೆ ಹೊಸ ಗಡಿಗೆಯನ್ನು ತಕ್ಕೊಂಡು ಬಂದು ಅದರಲ್ಲಿ ಉಪ್ಪು ಹಾಕಿರಿ ಅಂದನು. ಅವರು ಅದನ್ನು ಅವನ ಬಳಿಗೆ ತಕ್ಕೊಂಡು ಬಂದರು.

21ಅವನು ನೀರು ಬುಗ್ಗೆಯ ಬಳಿಗೆ ಹೊರಟುಹೋಗಿ ಅದರಲ್ಲಿ ಉಪ್ಪು ಹಾಕಿ ಹೇಳಿದ್ದೇನಂದರೆ--ಈ ನೀರನ್ನು ಶುದ್ಧ ಮಾಡಿದೆನು; ಇನ್ನು ಮೇಲೆ ಅದರಿಂದ ಮರಣವೂ ಬಂಜೆತನವೂ ಆಗದಿರಲೆಂದು ಕರ್ತನು ಹೇಳುತ್ತಾನೆ ಅಂದನು.

22ಎಲೀಷನು ಹೇಳಿದ ವಾಕ್ಯದ ಪ್ರಕಾರವೇ ಆ ನೀರು ಇಂದಿನ ವರೆಗೂ ಹಾಗೆಯೇ ಇರುತ್ತದೆ.

೨ ಅರಸುಗಳು 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी