ಯಾಕೋಬನು 1:12

ಕಷ್ಟಗಳನ್ನು ಸಹಿಸಿಕೊಳ್ಳುವವನು ಧನ್ಯನು; ಅವನು ಪರಿಶೋಧಿತನಾದ ಮೇಲೆ ಕರ್ತನು ತನ್ನನ್ನು ಪ್ರೀತಿಸುವವರಿಗೆ ವಾಗ್ದಾನ ಮಾಡಿದ ಜೀವದ ಕಿರೀಟ ವನ್ನು ಹೊಂದುವನು;

ಸಂದರ್ಭದೊಂದಿಗೆ ಓದಿ · ಯಾಕೋಬನು 1

10ಐಶ್ವರ್ಯ ವಂತನಾದ ಸಹೋದರನು ತಾನು ದೀನಸ್ಥಿತಿಗೆ ಬಂದೆ ನೆಂದು ಉಲ್ಲಾಸಪಡಲಿ. ಆದರೆ ಐಶ್ವರ್ಯವಂತನು ಹುಲ್ಲಿನ ಹೂವಿನಂತೆ ಗತಿಸಿ ಹೋಗುವನು.

11ಸೂರ್ಯನು ಉದಯಿಸಿದ ತಕ್ಷಣವೇ ಉಷ್ಣತೆ ಯಿಂದ ಹುಲ್ಲನ್ನು ಬಾಡಿಸಲು ಆ ಹುಲ್ಲಿನ ಹೂವು ಉದುರಿ ಅದರ ರೂಪದ ಸೊಗಸು ನಾಶವಾಗು ವದಷ್ಟೇ. ಹೀಗೆಯೇ ಐಶ್ವರ್ಯವಂತನು ತನ್ನ ದಾರಿ ಗಳಲ್ಲಿ ಬಾಡಿ ಹೋಗುವನು.

12ಕಷ್ಟಗಳನ್ನು ಸಹಿಸಿಕೊಳ್ಳುವವನು ಧನ್ಯನು; ಅವನು ಪರಿಶೋಧಿತನಾದ ಮೇಲೆ ಕರ್ತನು ತನ್ನನ್ನು ಪ್ರೀತಿಸುವವರಿಗೆ ವಾಗ್ದಾನ ಮಾಡಿದ ಜೀವದ ಕಿರೀಟ ವನ್ನು ಹೊಂದುವನು;

13ಯಾವನಾದರೂ ಶೋಧನೆಗೆ ಪ್ರೇರೇಪಿಸಲ್ಪಡುವಾಗ--ಈ ಪ್ರೇರಣೆಯು ನನಗೆ ದೇವರಿಂದ ಉಂಟಾಯಿತೆಂದು ಹೇಳಬಾರದು. ಯಾಕಂದರೆ ದೇವರು ಕೆಟ್ಟದ್ದರಿಂದ ಶೋಧಿಸಲಾರನು; ಆತನು ಯಾರನ್ನೂ ಶೋಧಿಸುವದೂ ಇಲ್ಲ.

14ಆದರೆ ಪ್ರತಿಯೊಬ್ಬನು ತನ್ನ ಸ್ವಂತ ದುರಾಶೆಯಿಂದ ಎಳೆಯಲ್ಪಟ್ಟು ಮರುಳುಗೊಂಡವನಾಗಿ ಶೋಧಿಸಲ್ಪಡುತ್ತಾನೆ.

ಯಾಕೋಬನು 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी