ಅದರೆ ಅವನ ಸಂಗಡ ಹೋದ ಮನುಷ್ಯರುಆ ಜನರ ಬಳಿಗೆ ಹೋಗಲು ನಮ್ಮಿಂದಾಗುವದಿಲ್ಲ; ಅವರು ನಮಗಿಂತ ಬಲಿಷ್ಠರಾಗಿದ್ದಾರೆ ಎಂದು ಹೇಳಿ ದರು.
29ಅಮಾಲೇಕ್ಯರು ದೇಶದ ದಕ್ಷಿಣದಲ್ಲಿ ವಾಸವಾಗಿದ್ದಾರೆ; ಹಿತ್ತಿಯರು ಯೆಬೂಸಿಯರು ಅಮೋ ರಿಯರು ಪರ್ವತಗಳಲ್ಲಿಯೂ ಕಾನಾನ್ಯರು ಸಮುದ್ರದ ಬಳಿಯಲ್ಲಿಯೂ ಯೊರ್ದನಿನ ತೀರದಲ್ಲಿಯೂ ವಾಸ ವಾಗಿದ್ದಾರೆ ಎಂದು ಹೇಳಿದರು.
30ಆದರೆ ಕಾಲೇಬನು ಮೋಶೆಯ ಎದುರಿನಲ್ಲಿ ಜನರನ್ನು ಸುಮ್ಮನಿರಿಸಿ--ನಾವು ತಕ್ಷಣವೇ ಹೋಗಿ ಅದನ್ನು ಸ್ವಾಧೀನಮಾಡಿಕೊಳ್ಳೋಣ. ಅದನ್ನು ಜಯಿ ಸಲು ನಾವು ನಿಜವಾಗಿಯೂ ಶಕ್ತ ರಾಗಿದ್ದೇವೆ ಅಂದನು.
31ಅದರೆ ಅವನ ಸಂಗಡ ಹೋದ ಮನುಷ್ಯರುಆ ಜನರ ಬಳಿಗೆ ಹೋಗಲು ನಮ್ಮಿಂದಾಗುವದಿಲ್ಲ; ಅವರು ನಮಗಿಂತ ಬಲಿಷ್ಠರಾಗಿದ್ದಾರೆ ಎಂದು ಹೇಳಿ ದರು.
32ಅವರು ಪಾಳತಿ ನೋಡಿದ ದೇಶದ ವಿಷಯ ಕೆಟ್ಟಸುದ್ಧಿಯನ್ನು ತಂದು--ನಾವು ಪಾಳತಿ ನೋಡುವ ದಕ್ಕೆ ಹಾದುಹೋದ ದೇಶವು ತನ್ನಲ್ಲಿ ವಾಸವಾಗಿರು ವವರನ್ನು ತಿಂದುಬಿಡುವ ದೇಶವಾಗಿದೆ; ನಾವು ಅದರಲ್ಲಿ ನೋಡಿದ ಜನರೆಲ್ಲಾ ಮಹಾಶರೀರದ ಮನುಷ್ಯರು.
33ಅಲ್ಲಿ ಅಮಾನುಷ್ಯರನ್ನೂ ಅಮಾನುಷ್ಯ ಸಂತಾನ ವಾದ ಅನಾಕನ ಮಕ್ಕಳನ್ನೂ ಕಂಡೆವು; ನಮ್ಮ ದೃಷ್ಟಿಗೆ ನಾವು ಮಿಡತೆಗಳ ಹಾಗೆ ಇದ್ದೆವು, ಅದೇ ಪ್ರಕಾರ ಅವರ ದೃಷ್ಟಿಗೂ ಇದ್ದೆವು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ