ಅರಣ್ಯಕಾಂಡ 9:6

ಆಗ ಶವದ ದೆಸೆಯಿಂದ ಅಶುದ್ಧರಾಗಿ ಪಸ್ಕವನ್ನು ಆ ದಿವಸದಲ್ಲಿ ಆಚರಿಸಲಿಕ್ಕಾಗದ ಕೆಲವು ಮನುಷ್ಯ ರಿದ್ದರು; ಅವರು ಆ ದಿವಸದಲ್ಲಿ ಮೋಶೆ ಆರೋನರ ಮುಂದೆ ಬಂದರು.

ಸಂದರ್ಭದೊಂದಿಗೆ ಓದಿ · ಅರಣ್ಯಕಾಂಡ 9

4ಆಗ ಮೋಶೆಯು ಪಸ್ಕವನ್ನು ಆಚರಿಸುವದಕ್ಕೆ ಇಸ್ರಾಯೇಲ್‌ ಮಕ್ಕಳ ಸಂಗಡ ಮಾತ ನಾಡಿದನು.

5ಹೀಗೆ ಅವರು ಮೊದಲನೇ ತಿಂಗಳಿನ ಹದಿನಾಲ್ಕನೆಯ ದಿವಸದ ಸಾಯಂಕಾಲ ಸೀನಾಯಿ ಅರಣ್ಯದಲ್ಲಿ ಪಸ್ಕವನ್ನು ಆಚರಿಸಿದರು. ಕರ್ತನು ಮೋಶೆಗೆ ಆಜ್ಞಾಪಿಸಿದ್ದೆಲ್ಲಾದರ ಪ್ರಕಾರ ಇಸ್ರಾಯೇಲ್‌ ಮಕ್ಕಳು ಮಾಡಿದರು.

6ಆಗ ಶವದ ದೆಸೆಯಿಂದ ಅಶುದ್ಧರಾಗಿ ಪಸ್ಕವನ್ನು ಆ ದಿವಸದಲ್ಲಿ ಆಚರಿಸಲಿಕ್ಕಾಗದ ಕೆಲವು ಮನುಷ್ಯ ರಿದ್ದರು; ಅವರು ಆ ದಿವಸದಲ್ಲಿ ಮೋಶೆ ಆರೋನರ ಮುಂದೆ ಬಂದರು.

7ಆ ಮನುಷ್ಯರು ಅವನ ಸಂಗಡ ಮಾತನಾಡಿ--ನಾವು ಸತ್ತ ಮನುಷ್ಯನ ದೇಹವನ್ನು ಮುಟ್ಟಿದ್ದರಿಂದ ಅಶುದ್ಧರಾದೆವು; ಆದದರಿಂದ ನಾವು ಇಸ್ರಾಯೇಲ್‌ ಮಕ್ಕಳ ಮಧ್ಯದಲ್ಲಿ ಕರ್ತನ ಅರ್ಪಣೆ ಯನ್ನು ಅದರ ಸಮಯದಲ್ಲಿ ಅರ್ಪಿಸದ ಹಾಗೆ ನಮಗೆ ಯಾಕೆ ಅಡ್ಡಿಯಾಗಬೇಕು ಅಂದರು.

8ಮೋಶೆ ಅವ ರಿಗೆ--ಸುಮ್ಮನೆ ನಿಲ್ಲಿರಿ, ಕರ್ತನು ನಿಮ್ಮ ವಿಷಯದಲ್ಲಿ ಏನು ಆಜ್ಞಾಪಿಸುವನೋ ನಾನು ವಿಚಾರಿಸುತ್ತೇನೆ ಅಂದನು.

ಅರಣ್ಯಕಾಂಡ 9 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी