ಯೆಹೋಶುವ 9:16

ಆದರೆ ಅವರ ಸಂಗಡ ಒಡಂಬಡಿಕೆ ಮಾಡಿ ಮೂರು ದಿವಸಗಳಾದ ತರುವಾಯ ಅವರು ತಮ್ಮ ನೆರೆಯವರೆಂದೂ ತಮ್ಮಲ್ಲಿ ಇರುವವರೆಂದೂ ಕೇಳಿ ದರು.

ಸಂದರ್ಭದೊಂದಿಗೆ ಓದಿ · ಯೆಹೋಶುವ 9

14ಆಗ ಇವರು ಕರ್ತನಿಂದ ಆಲೋಚನೆ ಯನ್ನು ಕೇಳದೆ ಅವರ ಆಹಾರದಲ್ಲಿ ತೆಗೆದುಕೊಂಡರು.

15ಯೆಹೋಶುವನು ಅವರ ಸಂಗಡ ಸಮಾಧಾನ ಮಾಡಿಕೊಂಡು ಅವರನ್ನು ಜೀವದಿಂದ ಇರಿಸುವದಕ್ಕೆ ಅವರ ಸಂಗಡ ಒಡಂಬಡಿಕೆ ಮಾಡಿದನು. ಇದಲ್ಲದೆ ಸಭೆಯ ಪ್ರಧಾನರು ಪ್ರಮಾಣಮಾಡಿದರು.

16ಆದರೆ ಅವರ ಸಂಗಡ ಒಡಂಬಡಿಕೆ ಮಾಡಿ ಮೂರು ದಿವಸಗಳಾದ ತರುವಾಯ ಅವರು ತಮ್ಮ ನೆರೆಯವರೆಂದೂ ತಮ್ಮಲ್ಲಿ ಇರುವವರೆಂದೂ ಕೇಳಿ ದರು.

17ಇಸ್ರಾಯೇಲ್‌ ಮಕ್ಕಳು ಪ್ರಯಾಣ ಮಾಡು ವಾಗ ಮೂರನೇ ದಿನದಲ್ಲಿ ಗಿಬ್ಯೋನ್‌, ಕೆಫೀರಾ, ಬೇರೋತ್‌, ಕಿರ್ಯತ್ಯಾರೀಮ್‌ ಎಂಬ ಅವರ ಪಟ್ಟಣ ಗಳಿಗೆ ಬಂದರು.

18ಸಭೆಯ ಪ್ರಧಾನರು ಅವರಿಗೆ ಇಸ್ರಾಯೇಲಿನ ದೇವರಾದ ಕರ್ತನ ಮೇಲೆ ಆಣೆ ಇಟ್ಟದ್ದರಿಂದ ಇಸ್ರಾಯೇಲ್‌ ಮಕ್ಕಳು ಅವರನ್ನು ಸಂಹರಿಸಲಿಲ್ಲ. ಆದರೆ ಸಭೆಯವರೆಲ್ಲರೂ ಇಸ್ರಾಯೇ ಲ್ಯರ ಪ್ರಧಾನರಿಗೆ ವಿರೋಧವಾಗಿ ಗುಣುಗುಟ್ಟಿದರು.

ಯೆಹೋಶುವ 9 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी