ಆದಿಕಾಂಡ 39:7

ಇವುಗಳಾದ ಮೇಲೆ ಯೋಸೇಫನ ಯಜಮಾನನ ಹೆಂಡತಿಯು ಅವನ ಮೇಲೆ ಕಣ್ಣುಹಾಕಿ--ನನ್ನ ಸಂಗಡ ಮಲಗು ಅಂದಳು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 39

5ಅವನನ್ನು ಮನೆಯಲ್ಲಿಯೂ ತನಗಿದ್ದ ಎಲ್ಲಾದರ ಮೇಲೆಯೂ ಮೇಲ್ವಿಚಾರಕನನ್ನಾಗಿ ಮಾಡಿದಂದಿನಿಂದ ಕರ್ತನು ಆ ಐಗುಪ್ತದವನ ಮನೆಯನ್ನು ಯೋಸೇಫನ ನಿಮಿತ್ತ ವಾಗಿ ಆಶೀರ್ವದಿಸಿದನು. ಮನೆಯಲ್ಲಿಯೂ ಹೊಲ ದಲ್ಲಿಯೂ (ಅವನಿಗಿದ್ದ) ಎಲ್ಲಾದರ ಮೇಲೆಯೂ ಕರ್ತನ ಆಶೀರ್ವಾದವಿತ್ತು.

6ಹೀಗಿರುವದರಿಂದ ಅವನು ತನಗಿದ್ದದ್ದನ್ನೆಲ್ಲಾ ಯೋಸೇಫನಿಗೆ ಒಪ್ಪಿಸಿ ತಾನು ತಿನ್ನುವ ರೊಟ್ಟಿಯ ವಿಷಯದಲ್ಲಿ ಹೊರತು ಬೇರೆ ಯಾವದರ ವಿಷಯದಲ್ಲೂ ಚಿಂತಿಸಲಿಲ್ಲ. ಯೋಸೇಫನು ಸುರೂಪಿಯೂ ಸೌಂದರ್ಯವಂತನೂ ಆಗಿದ್ದನು.

7ಇವುಗಳಾದ ಮೇಲೆ ಯೋಸೇಫನ ಯಜಮಾನನ ಹೆಂಡತಿಯು ಅವನ ಮೇಲೆ ಕಣ್ಣುಹಾಕಿ--ನನ್ನ ಸಂಗಡ ಮಲಗು ಅಂದಳು.

8ಆದರೆ ಅವನು ಅದಕ್ಕೆ ಒಪ್ಪದೆ ತನ್ನ ಯಜಮಾನನ ಹೆಂಡತಿಗೆ--ಇಗೋ, ನನ್ನ ಯಜಮಾನನು ತನ್ನ ಮನೆಯಲ್ಲಿರು ವದನ್ನು ತಿಳುಕೊಳ್ಳದೆ ತನಗಿದ್ದದ್ದನ್ನೆಲ್ಲಾ ನನಗೆ ಒಪ್ಪಿಸಿದ್ದಾನೆ.

9ಈ ಮನೆಯಲ್ಲಿ ನನಗಿಂತ ದೊಡ್ಡವ ನಾರೂ ಇಲ್ಲ. ನೀನು ಅವನ ಹೆಂಡತಿಯಾಗಿರುವದ ರಿಂದ ನಿನ್ನನ್ನಲ್ಲದೆ ನನಗೆ ಮತ್ತೇನೂ ಮರೆಮಾಡಲಿಲ್ಲ. ಹಾಗಿರುವಲ್ಲಿ ನಾನು ಈ ದೊಡ್ಡ ದುಷ್ಕೃತ್ಯಮಾಡಿ ದೇವರಿಗೆ ವಿರೋಧವಾಗಿ ಪಾಪಮಾಡುವದು ಹೇಗೆ ಅಂದನು.

ಆದಿಕಾಂಡ 39 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी