ಇಗೋ, ತನ್ನ ಪರಿಶುದ್ಧರಲ್ಲಿ ಆತನು ನಂಬಿಕೆ ಇಡುವದಿಲ್ಲ; ಹೌದು, ಆಕಾಶಗಳು ಆತನ ದೃಷ್ಟಿಯಲ್ಲಿ ನಿರ್ಮಲವಲ್ಲ.
13ದೇವರಿಗೆ ವಿರೋಧವಾಗಿ ನಿನ್ನ ಆತ್ಮವನ್ನು ತಿರುಗಿಸಿ ನಿನ್ನ ಬಾಯೊಳಗಿಂದ ಮಾತುಗಳನ್ನು ಹೊರಡಿಸುತ್ತೀ ಯಲ್ಲಾ.
14ನಿರ್ಮಲನಾಗುವ ಹಾಗೆ ಮನುಷ್ಯನು ಎಷ್ಟರವನು? ನೀತಿವಂತನಾಗಿರುವ ಹಾಗೆ ಸ್ತ್ರೀಯಿಂದ ಹುಟ್ಟಿದವನು ಯಾರು?
15ಇಗೋ, ತನ್ನ ಪರಿಶುದ್ಧರಲ್ಲಿ ಆತನು ನಂಬಿಕೆ ಇಡುವದಿಲ್ಲ; ಹೌದು, ಆಕಾಶಗಳು ಆತನ ದೃಷ್ಟಿಯಲ್ಲಿ ನಿರ್ಮಲವಲ್ಲ.
16ನೀರಿನಂತೆ ಅನ್ಯಾಯವನ್ನು ಕುಡಿಯುವ ಮನುಷ್ಯನು ಎಷ್ಟು ಹೆಚ್ಚಾಗಿ ಕೆಟ್ಟು ಅಸಹ್ಯವಾಗಿಯೂ ಮಲೀನನಾದವನಾಗಿಯೂ ಇದ್ದಾನಲ್ಲಾ!
17ನಾನು ನಿನಗೆ ತೋರಿಸುತ್ತೇನೆ, ನನ್ನನ್ನು ಕೇಳು; ನಾನು ನೋಡಿದ್ದನ್ನು ನಿನಗೆ ವಿವರಿಸುತ್ತೇನೆ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ