ಯೆಹೆಜ್ಕೇಲನು 36:14

ಆದದರಿಂದ ಇನ್ನು ಮುಂದೆ ನೀನು ಮನುಷ್ಯರನ್ನು ನುಂಗುವದಿಲ್ಲ; ಇನ್ನು ಮೇಲೆ ನಿನ್ನ ಜನಾಂಗದವರನ್ನು ಮಕ್ಕಳಿಲ್ಲದವ ರನ್ನಾಗಿ ಮಾಡುವದಿಲ್ಲ ಎಂದು ದೇವರಾದ ಕರ್ತನು ಹೇಳುತ್ತಾನೆ.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 36

12ಹೌದು, ಮನುಷ್ಯರು ನಿಮ್ಮ ಮೇಲೆ ನಡೆಯುವಂತೆ ನಾನು ಮಾಡುವೆನು, ಅದು ನನ್ನ ಜನರಾದ ಇಸ್ರಾಯೇಲ್ಯರ ಮೇಲೆಯೇ; ಅವರು ನಿನ್ನನ್ನು ಸ್ವಾಧೀನಮಾಡಿಕೊಳ್ಳುವರು, ನೀನು ಅವರಿಗೆ ಸ್ವಾಸ್ಥ್ಯವಾಗುವಿ ಮತ್ತು ನೀನು ಇನ್ನು ಮೇಲೆ ಅವರನ್ನು ಮಕ್ಕಳಿಲ್ಲದ ಮನುಷ್ಯರನ್ನಾಗಿ ಮಾಡುವದಿಲ್ಲ.

13ದೇವ ರಾದ ಕರ್ತನು ಹೀಗೆ ಹೇಳುತ್ತಾನೆ, ನೀನು ಮನುಷ್ಯರನ್ನು ನುಂಗುವಂಥ ದೇಶ ಮತ್ತು ನಿನ್ನ ಜನಗಳನ್ನು ಮಕ್ಕಳಿಲ್ಲ ದಂಥ ಜನಾಂಗಗಳನ್ನಾಗಿ ಮಾಡುವಂಥದ್ದು ಆಗಿರುವಿ ಎಂದು ಅವರು ನಿನಗೆ ಹೇಳುವರು;

14ಆದದರಿಂದ ಇನ್ನು ಮುಂದೆ ನೀನು ಮನುಷ್ಯರನ್ನು ನುಂಗುವದಿಲ್ಲ; ಇನ್ನು ಮೇಲೆ ನಿನ್ನ ಜನಾಂಗದವರನ್ನು ಮಕ್ಕಳಿಲ್ಲದವ ರನ್ನಾಗಿ ಮಾಡುವದಿಲ್ಲ ಎಂದು ದೇವರಾದ ಕರ್ತನು ಹೇಳುತ್ತಾನೆ.

15ಅಲ್ಲದೆ ಇನ್ನು ಮೇಲೆ ನೀನು ಅನ್ಯ ಜನಾಂಗಗಳ ನಿಂದೆಯನ್ನು ಕೇಳಿಸಿಕೊಳ್ಳದಂತೆ ನಾನು ಮಾಡುವೆನು; ನೀನು ಇನ್ನು ಮೇಲೆ ಜನಾಂಗದವರಿಂದ ತಿರಸ್ಕರಿಸಲ್ಪಡುವದಿಲ್ಲ; ನೀನು ನಿನ್ನ ಜನಾಂಗವನ್ನು ಇನ್ನೆಂದಿಗೂ ಬೀಳಿಸುವದಿಲ್ಲ ಎಂದು ದೇವರಾದ ಕರ್ತನು ಹೇಳುತ್ತಾನೆ.

16ಇದಲ್ಲದೆ ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ--

ಯೆಹೆಜ್ಕೇಲನು 36 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी