ಯೋಹಾನನು 19:19

ಇದಲ್ಲದೆ ಪಿಲಾತನು ಒಂದು ಶಿರೋನಾಮವನ್ನು ಬರೆಯಿಸಿ ಅದನ್ನು ಶಿಲುಬೆಯ ಮೇಲೆ ಇರಿಸಿದನು. ಆ ಬರಹವು ಏನಂದರೆ--ಯೆಹೂದ್ಯರ ಅರಸನಾದ ನಜರೇತಿನ ಯೇಸು ಎಂಬದೇ.

ಸಂದರ್ಭದೊಂದಿಗೆ ಓದಿ · ಯೋಹಾನನು 19

17ಆತನು ತನ್ನ ಶಿಲುಬೆಯನ್ನು ಹೊತ್ತುಕೊಂಡು ಕಪಾಲವೆಂದು ಕರೆಯಲ್ಪಟ್ಟ ಸ್ಥಳಕ್ಕೆ ಹೋದನು. ಅದು ಇಬ್ರಿಯ ಭಾಷೆಯಲ್ಲಿ ಗೊಲ್ಗೊಥಾ (ಬುರುಡೆಗಳ ಸ್ಥಳ) ಎಂದು ಕರೆಯಲ್ಪಡುತ್ತದೆ.

18ಅಲ್ಲಿ ಇಬ್ಬರು ಅಂದರೆ ಆ ಕಡೆಗೊಬ್ಬನನ್ನೂ ಈ ಕಡೆಗೊಬ್ಬನನ್ನು ಮಧ್ಯೆ ಯೇಸುವನ್ನೂ ಇರಿಸಿ ಆತನೊಂದಿಗೆ ಶಿಲುಬೆಗೆ ಹಾಕಿದರು.

19ಇದಲ್ಲದೆ ಪಿಲಾತನು ಒಂದು ಶಿರೋನಾಮವನ್ನು ಬರೆಯಿಸಿ ಅದನ್ನು ಶಿಲುಬೆಯ ಮೇಲೆ ಇರಿಸಿದನು. ಆ ಬರಹವು ಏನಂದರೆ--ಯೆಹೂದ್ಯರ ಅರಸನಾದ ನಜರೇತಿನ ಯೇಸು ಎಂಬದೇ.

20ಈ ಶಿರೋನಾಮ ವನ್ನು ಯೆಹೂದ್ಯರಲ್ಲಿ ಅನೇಕರು ಓದಿದರು. ಯೇಸು ಶಿಲುಬೆಗೆ ಹಾಕಲ್ಪಟ್ಟ ಆ ಸ್ಥಳವು ಆ ಪಟ್ಟಣಕ್ಕೆ ಸವಿಾಪವಾಗಿತ್ತು. ಇದು ಇಬ್ರಿಯ ಗ್ರೀಕ್‌ ಮತ್ತು ಲ್ಯಾಟಿನ್‌ ಭಾಷೆಗಳಲ್ಲಿ ಬರೆಯಲ್ಪಟ್ಟಿತ್ತು.

21ಹೀಗಿರಲಾಗಿ ಯೆಹೂದ್ಯರ ಪ್ರಧಾನಯಾಜಕರು ಪಿಲಾತನಿಗೆ-- ಯೆಹೂದ್ಯರ ಅರಸನೆಂದು ಬರೆಯಬೇಡ; ಆದರೆ--ನಾನೇ ಯೆಹೂದ್ಯರ ಅರಸನಾಗಿದ್ದೇನೆ ಎಂದು ಅವನು ಹೇಳಿದನು ಎಂದು ಬರೆ ಅಂದರು.

ಯೋಹಾನನು 19 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी