ಅವರು ಕರ್ತನ ಮನೆಯನ್ನು ಬಲಪಡಿಸುವದಕ್ಕೆ ಯುದ್ಧಗಳಿಂದಲೂ ಕೊಳ್ಳೆಯಿಂದಲೂ ಸಂಪಾದಿಸಿ ದವುಗಳನ್ನು ಪ್ರತಿಷ್ಠೆಮಾಡಿದರು.
25ಇವನ ಸಹೋದರರು--ಎಲಿಯೇಜೆರನ ಮಗನು ರೆಹಬ್ಯನು, ಇವನ ಮಗನು ಯೆಶಾಯನು, ಇವನ ಮಗನು ಯೋರಾಮನು, ಇವನ ಮಗನು ಜಿಕ್ರೀಯು, ಇವನ ಮಗನು ಶೆಲೋಮೊತನು.
26ಈ ಶೆಲೋಮೊತನೂ ಅವನ ಸಹೋದರರೂ ಅರಸ ನಾದ ದಾವೀದನೂ ಮುಖ್ಯಸ್ಥರಾದ ಪಿತೃಗಳೂ ಸೈನ್ಯಾಧಿಪತಿಗಳಾದ ಸಹಸ್ರಗಳ ಮೇಲೆಯೂ ಶತಗಳ ಮೇಲೆಯೂ ಅಧಿಪತಿಗಳಾದವರೂ ಪ್ರತಿಷ್ಠೆಮಾಡಿದ ಪ್ರತಿಷ್ಠವಾದವುಗಳ ಬೊಕ್ಕಸಗಳ ಮೇಲೆಯೂ ಇದ್ದರು.
27ಅವರು ಕರ್ತನ ಮನೆಯನ್ನು ಬಲಪಡಿಸುವದಕ್ಕೆ ಯುದ್ಧಗಳಿಂದಲೂ ಕೊಳ್ಳೆಯಿಂದಲೂ ಸಂಪಾದಿಸಿ ದವುಗಳನ್ನು ಪ್ರತಿಷ್ಠೆಮಾಡಿದರು.
28ಇದಲ್ಲದೆ ಪ್ರವಾ ದಿಯಾದ ಸಮುವೇಲನೂ ಕೀಷನ ಮಗನಾದ ಸೌಲನೂ ನೇರನ ಮಗನಾದ ಅಬ್ನೇರನೂ ಚೆರೂ ಯಳ ಮಗನಾದ ಯೋವಾಬನೂ ಪ್ರತಿಷ್ಠೆಮಾಡಿ ದೆಲ್ಲವೂ ಮತ್ತು ಯಾರು ಪ್ರತಿಷ್ಠೆಮಾಡಿದ್ದರೋ ಅವೆ ಲ್ಲವೂ ಶೆಲೋಮೊತನ ಕೈಕೆಳಗೂ ಅವನ ಸಹೋ ದರರ ಕೈಕೆಳಗೂ ಇತ್ತು.
29ಇಚ್ಹಾರ್ಯರಲ್ಲಿ ಕೆನನ್ಯನೂ ಅವನ ಕುಮಾರರೂ ಪಾರುಪತ್ಯಗಾರರಿಗೋಸ್ಕರವೂ ನ್ಯಾಯಾಧಿಪತಿಗಳಿ ಗೋಸ್ಕರವೂ ಇಸ್ರಾಯೇಲಿನ ಮೇಲೆ ಹೊರಗಿನ ಕಾರ್ಯಗಳನ್ನು ನೋಡಲು ಇಡಲ್ಪಟ್ಟಿದ್ದರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ