ಕರ್ತನ ಮುಂದೆ ಬೆಟ್ಟಗಳು ಕರಗಿದವು; ಇಸ್ರಾಯೇಲಿನ ದೇವರಾದ ಕರ್ತನ ಮುಂದೆ ಸೀನಾಯಿ ಪರ್ವತವು ಸಹ ಕರಗಿತು.
3ಓ ಅರಸರೇ, ಕೇಳಿರಿ; ಓ ಪ್ರಭುಗಳೇ, ಕಿವಿಗೊಡಿರಿ; ನಾನು, ನಾನೇ ಕರ್ತನಿಗೆ ಹಾಡುವೆನು; ಇಸ್ರಾಯೇಲಿನ ದೇವರಾದ ಕರ್ತನನ್ನು ಕೀರ್ತಿಸುವೆನು.
4ಕರ್ತನೇ, ನೀನು ಸೇಯಾರಿನಿಂದ ಹೊರಟು ಎದೋ ಮಿನ ಹೊಲದಿಂದ ಮುನ್ನಡೆಯುವಾಗ ಭೂಮಿ ನಡುಗಿತು, ಆಕಾಶವು ಸುರಿಯಿತು; ಮೇಘಗಳು ಸಹ ನೀರು ಸುರಿದವು.
5ಕರ್ತನ ಮುಂದೆ ಬೆಟ್ಟಗಳು ಕರಗಿದವು; ಇಸ್ರಾಯೇಲಿನ ದೇವರಾದ ಕರ್ತನ ಮುಂದೆ ಸೀನಾಯಿ ಪರ್ವತವು ಸಹ ಕರಗಿತು.
6ಅನಾತನ ಮಗನಾದ ಶಮ್ಗರನ ದಿವಸಗಳಲ್ಲಿಯೂ ಯಾಯೇಲಳ ದಿವಸಗಳಲ್ಲಿಯೂ ದಾರಿಗಳು ನಿಂತು ಹೋದವು; ಮಾರ್ಗಸ್ಥರು ಡೊಂಕು ದಾರಿಗಳಲ್ಲಿ ನಡೆಯುತ್ತಿದ್ದರು.
7ದೆಬೋರಳಾದ ನಾನು ಏಳುವ ಮಟ್ಟಿಗೂ ಇಸ್ರಾಯೇಲಿನಲ್ಲಿ ತಾಯಾಗಿ ನಾನು ಏಳುವ ಮಟ್ಟಿಗೂ ಹಳ್ಳಿಗಳ ನಿವಾಸಿಗಳು ನಿಂತುಹೋದರು; ಇಸ್ರಾಯೇಲಿನಲ್ಲಿ ನಿಂತುಹೋದರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ