ಲೂಕನು 11:29

ಜನರು ಗುಂಪುಗುಂಪಾಗಿ ಕೂಡಿ ಬಂದಿದ್ದಾಗ ಆತನು--ಇದು ದುಷ್ಟಸಂತತಿಯು; ಇದು ಸೂಚಕ ಕಾರ್ಯವನ್ನು ಹುಡುಕುತ್ತದೆ. ಪ್ರವಾದಿಯಾದ ಯೋನ ನಲ್ಲಿ ಆದ ಸೂಚಕಕಾರ್ಯವೇ ಹೊರತು ಬೇರೆ ಯಾವ ಸೂಚಕಕಾರ್ಯವೂ ಇದಕ್ಕೆ ಕೊಡಲ್ಪಡ ಲಾರದು.

ಸಂದರ್ಭದೊಂದಿಗೆ ಓದಿ · ಲೂಕನು 11

27ಇದಾದ ಮೇಲೆ ಆತನು ಇವುಗಳನ್ನು ಹೇಳು ತ್ತಿದ್ದಾಗ ಆ ಗುಂಪಿನಲ್ಲಿದ್ದ ಒಬ್ಬ ಸ್ತ್ರೀಯು ತನ್ನ ಸ್ವರವನ್ನು ಎತ್ತಿ ಆತನಿಗೆ--ನಿನ್ನನ್ನು ಹೊತ್ತ ಗರ್ಭವೂ ನೀನು ಕುಡಿದ ಮೊಲೆಗಳೂ ಧನ್ಯವಾದವುಗಳು ಎಂದು ಹೇಳಿದಳು.

28ಆದರೆ ಆತನು--ಹೌದು, ಇದಕ್ಕಿಂ ತಲೂ ದೇವರ ವಾಕ್ಯವನ್ನು ಕೇಳಿ ಅದರಂತೆ ನಡೆಯು ವವರೇ ಧನ್ಯರು ಎಂದು ಹೇಳಿದನು.

29ಜನರು ಗುಂಪುಗುಂಪಾಗಿ ಕೂಡಿ ಬಂದಿದ್ದಾಗ ಆತನು--ಇದು ದುಷ್ಟಸಂತತಿಯು; ಇದು ಸೂಚಕ ಕಾರ್ಯವನ್ನು ಹುಡುಕುತ್ತದೆ. ಪ್ರವಾದಿಯಾದ ಯೋನ ನಲ್ಲಿ ಆದ ಸೂಚಕಕಾರ್ಯವೇ ಹೊರತು ಬೇರೆ ಯಾವ ಸೂಚಕಕಾರ್ಯವೂ ಇದಕ್ಕೆ ಕೊಡಲ್ಪಡ ಲಾರದು.

30ಯೋನನು ನಿನೆವೆಯವರಿಗೆ ಸೂಚನೆ ಯಾಗಿದ್ದಂತೆಯೇ ಮನುಷ್ಯಕುಮಾರನು ಸಹ ಈ ಸಂತತಿಗೆ ಸೂಚನೆಯಾಗಿರುವನು.

31ನ್ಯಾಯ ತೀರ್ಪಿ ನಲ್ಲಿ ದಕ್ಷಿಣದ ರಾಣಿಯು ಈ ಸಂತತಿ ಯವರೊಂದಿಗೆ ಎದ್ದು ಇವರನ್ನು ಖಂಡಿಸುವಳು; ಯಾಕಂದರೆ ಆಕೆಯು ಸೊಲೊಮೋನನ ಜ್ಞಾನವನ್ನು ಕೇಳುವದಕ್ಕೆ ಭೂಮಿಯ ಕಟ್ಟಕಡೆಯ ಭಾಗಗಳಿಂದ ಬಂದಳು; ಮತ್ತು ಇಗೋ, ಸೊಲೊಮೋನನಿಗಿಂತಲೂ ಹೆಚ್ಚಿನವನು ಇಲ್ಲಿದ್ದಾನೆ.

ಲೂಕನು 11 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी