ಆಗ ಅರಸನೂ ಅವನ ಸಂಗಡ ಇಸ್ರಾಯೇಲ್ಯ ರೆಲ್ಲರೂ ಕರ್ತನ ಮುಂದೆ ಬಲಿಗಳನ್ನು ಅರ್ಪಿಸಿದರು.
60ಕಾರ್ಯಕ್ಕೆ ತಕ್ಕದ್ದಾಗಿ ಸಕಲ ಕಾಲಗಳಲ್ಲಿ ತನ್ನ ಸೇವಕನ ನ್ಯಾಯವನ್ನೂ ತನ್ನ ಜನವಾದ ಇಸ್ರಾಯೇಲಿನ ನ್ಯಾಯವನ್ನೂ ತೀರಿಸುವ ಹಾಗೆ ನಾನು ಕರ್ತನ ಮುಂದೆ ವಿಜ್ಞಾಪನೆ ಮಾಡಿದ ಈ ನನ್ನ ಮಾತುಗಳು ರಾತ್ರಿ ಹಗಲು ನಮ್ಮ ದೇವರಾದ ಕರ್ತನ ಬಳಿಯಲ್ಲಿ ಇರಲಿ.
61ಇಂದಿನ ಹಾಗೆಯೇ ಆತನ ಕಟ್ಟಳೆಗಳಲ್ಲಿ ನಡೆಯಲೂ ಆತನ ಆಜ್ಞೆಗಳನ್ನು ಕೈಕೊಳ್ಳಲೂ ನಮ್ಮ ದೇವರಾದ ಕರ್ತನ ಸಂಗಡ ನಿಮ್ಮ ಹೃದಯವು ಸಂಪೂರ್ಣವಾಗಿರಲಿ ಅಂದನು.
62ಆಗ ಅರಸನೂ ಅವನ ಸಂಗಡ ಇಸ್ರಾಯೇಲ್ಯ ರೆಲ್ಲರೂ ಕರ್ತನ ಮುಂದೆ ಬಲಿಗಳನ್ನು ಅರ್ಪಿಸಿದರು.
63ಸೊಲೊಮೋನನು ಕರ್ತನಿಗೆ ಅರ್ಪಿಸಿದ ಸಮಾ ಧಾನದ ಬಲಿಗಳಿಗೋಸ್ಕರ ಇಪ್ಪತ್ತೆರಡು ಸಾವಿರ ಎತ್ತು ಗಳನ್ನೂ ಲಕ್ಷದ ಇಪ್ಪತ್ತು ಸಾವಿರ ಕುರಿಗಳನ್ನೂ ಅರ್ಪಿಸಿದನು. ಹೀಗೆಯೇ ಅರಸನೂ ಇಸ್ರಾಯೇಲಿನ ಸಮಸ್ತ ಮಕ್ಕಳೂ ಕರ್ತನ ಮಂದಿರವನ್ನು ಪ್ರತಿಷ್ಠೆ ಮಾಡಿದರು.
64ಅದೇ ದಿನದಲ್ಲಿ ಅರಸನು ಕರ್ತನ ಮನೆಯ ಮಧ್ಯ ಅಂಗಳವನ್ನು ಪರಿಶುದ್ಧ ಮಾಡಿದನು. ಕರ್ತನ ಮುಂದಿರುವ ತಾಮ್ರದ ಬಲಿ ಪೀಠದ ಮೇಲೆ ದಹನ ಬಲಿಗಳನ್ನೂ ಕಾಣಿಕೆಗಳನ್ನೂ ಸಮಾಧಾನದ ಬಲಿಗಳ ಕೊಬ್ಬನ್ನೂ ಇಡುವದಕ್ಕೆ ಸ್ಥಳ ಸಾಲದೆ ಇದ್ದದರಿಂದ ಅಲ್ಲಿ ದಹನಬಲಿಗಳನ್ನೂ ಕಾಣಿಕೆಗಳನ್ನೂ ಸಮಾಧಾನದ ಬಲಿಗಳ ಕೊಬ್ಬನ್ನೂ ಅರ್ಪಿಸಿದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ