ಆದಿಕಾಂಡ 26:7

ಆ ಸ್ಥಳದ ಮನುಷ್ಯರು ಅವನ ಹೆಂಡತಿಯ ವಿಷಯದಲ್ಲಿ ವಿಚಾರಿಸಿದಾಗ ಅವನು--ರೆಬೆಕ್ಕಳು ನೋಟಕ್ಕೆ ಸೌಂದರ್ಯಳಾಗಿದ್ದರಿಂದ ಈಕೆಯ ನಿಮಿತ್ತ ಆ ಸ್ಥಳದ ಜನರು ತನ್ನನ್ನು ಕೊಂದಾರೆಂದು ಆಕೆಯು ತನ್ನ ಹೆಂಡತಿಯೆಂದು ಹೇಳುವದಕ್ಕೆ ಅಂಜಿ ಅವನು--ಆಕೆಯು ನನ್ನ ತಂಗಿ ಅಂದನು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 26

5ಅಬ್ರಹಾಮನು ನನ್ನ ಮಾತಿಗೆ ವಿಧೇಯನಾಗಿ ನನ್ನ ನೇಮವಿಧಿ ಆಜ್ಞೆ ಕಟ್ಟಳೆಗಳನ್ನು ಕೈಕೊಂಡನು ಅಂದನು.

6ಆಗ ಇಸಾಕನು ಗೆರಾರಿನಲ್ಲಿ ವಾಸವಾಗಿದ್ದನು.

7ಆ ಸ್ಥಳದ ಮನುಷ್ಯರು ಅವನ ಹೆಂಡತಿಯ ವಿಷಯದಲ್ಲಿ ವಿಚಾರಿಸಿದಾಗ ಅವನು--ರೆಬೆಕ್ಕಳು ನೋಟಕ್ಕೆ ಸೌಂದರ್ಯಳಾಗಿದ್ದರಿಂದ ಈಕೆಯ ನಿಮಿತ್ತ ಆ ಸ್ಥಳದ ಜನರು ತನ್ನನ್ನು ಕೊಂದಾರೆಂದು ಆಕೆಯು ತನ್ನ ಹೆಂಡತಿಯೆಂದು ಹೇಳುವದಕ್ಕೆ ಅಂಜಿ ಅವನು--ಆಕೆಯು ನನ್ನ ತಂಗಿ ಅಂದನು.

8ಅವನು ಅಲ್ಲಿ ಬಹಳ ದಿನಗಳಿದ್ದ ಮೇಲೆ ಆದದ್ದೇನಂದರೆ, ಫಿಲಿಷ್ಟಿಯರ ಅರಸನಾದ ಅಬೀಮೆಲೆ ಕನು ಕಿಟಕಿಯಿಂದ ನೋಡುತ್ತಿದಾಗ ಅಗೋ, ಇಸಾಕನು ತನ್ನ ಹೆಂಡತಿಯಾದ ರೆಬೆಕ್ಕಳ ಸಂಗಡ ಸರಸವಾಡುತ್ತಿದ್ದನು.

9ಆಗ ಅಬೀಮೆಲೆಕನು ಇಸಾಕ ನನ್ನು ಕರೆದು--ಅಗೋ, ಆಕೆಯು ಖಂಡಿತ ನಿನ್ನ ಹೆಂಡತಿಯಾಗಿದ್ದಾಳೆ. ಆದರೆ ನೀನು--ಆಕೆಯು ನನ್ನ ತಂಗಿ ಎಂದು ಯಾಕೆ ಹೇಳಿದಿ ಅಂದನು. ಇಸಾಕನು ಅವನಿಗೆ--ನಾನು ಆಕೆಯ ನಿಮಿತ್ತ ಸಾಯಬಾರ ದೆಂದು ಹಾಗೆ ಹೇಳಿದೆನು ಅಂದನು.

ಆದಿಕಾಂಡ 26 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी