ಯೆಹೋಶುವ 5:5

ಐಗುಪ್ತದಿಂದ ಹೊರಟ ಜನರೆಲ್ಲರೂ ಸುನ್ನತಿಮಾಡಲ್ಪಟ್ಟಿದ್ದರು; ಆದರೆ ಐಗುಪ್ತ ದಿಂದ ಹೊರಟಾಗ ಅರಣ್ಯದೊಳಗೆ ಮಾರ್ಗದಲ್ಲಿ ಹುಟ್ಟಿದ ಸಕಲ ಜನರು ಸುನ್ನತಿಮಾಡಲ್ಪಡಲಿಲ್ಲ.

ಸಂದರ್ಭದೊಂದಿಗೆ ಓದಿ · ಯೆಹೋಶುವ 5

3ಆಗ ಯೆಹೋಶುವನು ತಾನು ಹರಿತವಾದ ಚೂರಿಗಳನ್ನು ಮಾಡಿಕೊಂಡು ಇಸ್ರಾಯೇಲ್‌ ಮಕ್ಕಳಿಗೆ ಸುನ್ನತಿ ಗುಡ್ಡದಲ್ಲಿ ಸುನ್ನತಿ ಮಾಡಿದನು.

4ಯೆಹೋಶುವನು ಸುನ್ನತಿಮಾಡಿದ ಕಾರಣವೇನಂದರೆ--ಐಗುಪ್ತದಿಂದ ಹೊರಟ ಸಕಲ ಜನರು ಗಂಡಸರಾದ ಯುದ್ಧದ ಮನುಷ್ಯರೆಲ್ಲರು ಐಗುಪ್ತದಿಂದ ಹೊರಟಾಗ ಅರಣ್ಯದೊಳಗೆ ಮಾರ್ಗ ದಲ್ಲಿ ಸತ್ತು ಹೋದರು.

5ಐಗುಪ್ತದಿಂದ ಹೊರಟ ಜನರೆಲ್ಲರೂ ಸುನ್ನತಿಮಾಡಲ್ಪಟ್ಟಿದ್ದರು; ಆದರೆ ಐಗುಪ್ತ ದಿಂದ ಹೊರಟಾಗ ಅರಣ್ಯದೊಳಗೆ ಮಾರ್ಗದಲ್ಲಿ ಹುಟ್ಟಿದ ಸಕಲ ಜನರು ಸುನ್ನತಿಮಾಡಲ್ಪಡಲಿಲ್ಲ.

6ಕರ್ತನ ಸ್ವರಕ್ಕೆ ವಿಧೇಯರಾಗದೆ ಹೋದದರಿಂದ ಐಗುಪ್ತದಿಂದ ಹೊರಟ ಯುದ್ಧದ ಮನುಷ್ಯರಾದ ಜನರೆಲ್ಲಾ ನಾಶವಾಗುವ ವರೆಗೂ ಇಸ್ರಾಯೇಲ್‌ ಮಕ್ಕಳು ನಾಲ್ವತ್ತು ವರುಷಗಳು ಅರಣ್ಯದಲ್ಲಿ ಅಲೆದಾಡು ತ್ತಿದ್ದರು; ಯಾಕಂದರೆ ನಮಗೆ ಕೊಡುವದಕ್ಕೆ ಕರ್ತನು ಅವರ ತಂದೆಗಳಿಗೆ ಆಣೆ ಇಟ್ಟ ದೇಶವನ್ನು ಅಂದರೆ ಹಾಲೂ ಜೇನೂ ಹರಿಯುವ ದೇಶವನ್ನು ಅವರಿಗೆ ತೋರಿಸುವದಿಲ್ಲ ಎಂದು ಕರ್ತನು ಅವರಿಗೆ ಆಣೆ ಇಟ್ಟಿದ್ದನು.

7ಅವರಿಗೆ ತರುವಾಯ ಹುಟ್ಟಿದ ಅವರ ಮಕ್ಕಳಿಗೆ ಯೆಹೋಶುವನು ಸುನ್ನತಿಮಾಡಿದನು. ಯಾಕಂದರೆ ಇವರಿಗೆ ಮಾರ್ಗದಲ್ಲಿ ಸುನ್ನತಿಮಾಡದೆ ಇದ್ದದರಿಂದ ಇವರು ಸುನ್ನತಿ ಇಲ್ಲದವರಾಗಿದ್ದರು.

ಯೆಹೋಶುವ 5 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी