ಯೆಹೆಜ್ಕೇಲನು 48:13

ಯಾಜಕರ ಮೇರೆಗೆ ಎದುರಾಗಿ ಲೇವಿಯರಿಗೆ ಇಪ್ಪತ್ತೈದು ಸಾವಿರ ಉದ್ದವೂ ಹತ್ತು ಸಾವಿರ ಅಗಲವೂ ಆಗಬೇಕು. ಎಲ್ಲಾ ಉದ್ದವೂ ಇಪ್ಪತ್ತೈದು ಸಾವಿರ ಮತ್ತು ಅಗಲವು ಹತ್ತು ಸಾವಿರ.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 48

11ಇದು ನನ್ನ ಆಜ್ಞೆಯಂತೆ ನಡಕೊಂಡ ಇಸ್ರಾಯೇಲಿನ ಮಕ್ಕಳು ತಪ್ಪಿಹೋದಾಗ, ಲೇವಿಯರೂ ತಪ್ಪಿಹೋದ ಪ್ರಕಾರ ತಪ್ಪಿಹೋಗದೆ ಇದ್ದಂತ ಚಾದೋ ಕನ ಕುಮಾರರಲ್ಲಿ ಪರಿಶುದ್ಧ ಮಾಡಲ್ಪಟ್ಟ ಯಾಜಕರ ದಾಗಿರಬೇಕು;

12ಅರ್ಪಿಸಲ್ಪಟ್ಟ ಈ ದೇಶದ ಕಾಣಿಕೆ ಲೇವಿಯರ ಮೇರೆಯ ಬಳಿಯಲ್ಲಿಯೇ ಅತಿ ಪರಿಶುದ್ಧ ವಾದದ್ದಾಗಿರಬೇಕು.

13ಯಾಜಕರ ಮೇರೆಗೆ ಎದುರಾಗಿ ಲೇವಿಯರಿಗೆ ಇಪ್ಪತ್ತೈದು ಸಾವಿರ ಉದ್ದವೂ ಹತ್ತು ಸಾವಿರ ಅಗಲವೂ ಆಗಬೇಕು. ಎಲ್ಲಾ ಉದ್ದವೂ ಇಪ್ಪತ್ತೈದು ಸಾವಿರ ಮತ್ತು ಅಗಲವು ಹತ್ತು ಸಾವಿರ.

14ಅವರು ಅದರಲ್ಲಿ ಏನನ್ನೂ ಮಾರಬಾರದು, ಬದಲಾ ಯಿಸಬಾರದು, ದೇಶದ ಪ್ರಥಮ ಫಲವನ್ನು ಯಾರಿ ಗೂ ಕೊಡಬಾರದು; ಅದು ಕರ್ತನಿಗೆ ಪರಿಶುದ್ಧವಾ ಗಿದೆ.

15ಅಗಲದಲ್ಲಿ ಮಿಕ್ಕ ಐದು ಸಾವಿರವೂ ಇಪ್ಪತ್ತೈದು ಸಾವಿರಕ್ಕೆ ಎದುರಾಗಿಯೂ ಪಟ್ಟಣಕ್ಕೆ ಸಾಧಾರಣವಾದ ಸ್ಥಳವು ನಿವಾಸಗಳಿಗಾಗಿಯೂ ಉಪ ನಗರಗಳಾಗಿಯೂ ಸಾಧಾರಣವಾದ ಸ್ಥಳವಾಗಿರಬೇಕು; ಪಟ್ಟಣವು ಅದರ ಮಧ್ಯದಲ್ಲಿರಬೇಕು;

ಯೆಹೆಜ್ಕೇಲನು 48 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी