೧ ಅರಸುಗಳು 18:8

ಇವನು ಅವನಿಗೆ--ನಾನೇ, ನೀನು ಹೋಗಿ--ಇಗೋ, ಎಲೀಯನು ಇಲ್ಲಿದ್ದಾನೆಂದು ನಿನ್ನ ಯಜಮಾನನಿಗೆ ಹೇಳು ಅಂದನು.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 18

6ಅವರು ದೇಶವನ್ನು ಹಾದು ಹೋಗಲು ಅದನ್ನು ವಿಭಾಗ ಮಾಡಿಕೊಂಡು ಅಹಾಬನು ಒಂದು ಮಾರ್ಗದಲ್ಲಿಯೂ ಓಬದ್ಯನು ಮತ್ತೊಂದು ಮಾರ್ಗದಲ್ಲಿಯೂ ಪ್ರತ್ಯೇಕ ವಾಗಿ ಹೋದರು.

7ಓಬದ್ಯನು ಮಾರ್ಗದಲ್ಲಿ ಹೋಗುತ್ತಿರುವಾಗ ಇಗೋ, ಎಲೀಯನು ಅವನನ್ನು ಸಂಧಿಸಿದನು. ಓಬದ್ಯನು ಇವನನ್ನು ಗುರುತಿಸಿ ಮೊರೆ ಕೆಳಗಾಗಿ ಬಿದ್ದು--ನೀನು ನನ್ನ ಒಡೆಯನಾದ ಎಲೀಯನಲ್ಲವೋ ಅಂದನು.

8ಇವನು ಅವನಿಗೆ--ನಾನೇ, ನೀನು ಹೋಗಿ--ಇಗೋ, ಎಲೀಯನು ಇಲ್ಲಿದ್ದಾನೆಂದು ನಿನ್ನ ಯಜಮಾನನಿಗೆ ಹೇಳು ಅಂದನು.

9ಅದಕ್ಕ ವನು--ಅಹಾಬನು ನನ್ನನ್ನು ಕೊಂದುಹಾಕುವ ಹಾಗೆ ನೀನು ನಿನ್ನ ಸೇವಕನನ್ನು ಅವನ ಕೈಯಲ್ಲಿ ಒಪ್ಪಿಸಿಕೊಡಲು ನಾನೇನು ಪಾಪಮಾಡಿದೆನು.

10ನಿನ್ನ ದೇವರಾದ ಕರ್ತನ ಜೀವದಾಣೆ, ನನ್ನ ಯಜಮಾನನು ನಿನ್ನನ್ನು ಹುಡುಕಲು ಕಳುಹಿಸದ ಜನಾಂಗವೂ ರಾಜ್ಯವೂ ಒಂದೂ ಇಲ್ಲ. ಅವರು--ಅವನು ಇಲ್ಲ ಎಂದು ಹೇಳಿ ದಾಗ ಅವರು ನಿನ್ನನ್ನು ಕಂಡಿದ್ದಿಲ್ಲವೆಂದು ರಾಜ್ಯಕ್ಕೂ ಜನಾಂಗಕ್ಕೂ ಆಣೆ ಇಡಿಸಿಕೊಂಡನು.

೧ ಅರಸುಗಳು 18 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी