ಇಗೋ, ಚಳಿ ಗಾಲವು ಗತಿಸಿತು; ಮಳೆಯು ನಿಂತುಹೋಯಿತು;
9ನನ್ನ ಪ್ರಿಯನು ಜಿಂಕೆಯ ಹಾಗೆ ಇಲ್ಲವೆ ದುಪ್ಪಿಯ ಮರಿಯ ಹಾಗೆ ಇದ್ದಾನೆ. ಇಗೋ, ಅವನು ನಮ್ಮ ಗೋಡೆಯ ಹಿಂದೆ ನಿಂತು ಜಲಾಂತರಗಳಿಂದ ತನ್ನನ್ನು ತೋರಿಸಿ ಕಿಟಕಿಗಳಿಂದ ನೋಡುತ್ತಾನೆ.
10ನನ್ನ ಪ್ರಿಯನು ಮಾತಾಡಿ--ಏಳು, ನನ್ನ ಪ್ರಿಯಳೇ, ನನ್ನ ಸುಂದರಿಯೇ, ಹೊರಟು ಬಾ.
11ಇಗೋ, ಚಳಿ ಗಾಲವು ಗತಿಸಿತು; ಮಳೆಯು ನಿಂತುಹೋಯಿತು;
12ಪುಷ್ಪಗಳು ಭೂಮಿಯ ಮೇಲೆ ಕಾಣಿಸುತ್ತವೆ; ಪಕ್ಷಿಗಳು ಹಾಡುವ ಕಾಲ ಬಂತು; ಬೆಳವಕ್ಕಿಯ ಸ್ವರವು ನಮ್ಮ ದೇಶದಲ್ಲಿ ಕೇಳಲ್ಪಡುತ್ತದೆ.
13ಅಂಜೂರದ ಗಿಡವು ಅದರ ಹೀಚುಗಳನ್ನು ಬಿಡುತ್ತದೆ. ದ್ರಾಕ್ಷೇ ಬಳ್ಳಿಗಳ ಹೂವು ಅದರ ಸುವಾಸನೆಯನ್ನು ಕೊಡು ತ್ತದೆ. ಏಳು, ನನ್ನ ಪ್ರಿಯಳೇ, ನನ್ನ ಸುಂದರಿಯೇ, ಹೊರಟು ಬಾ ಎಂಬದು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ