ಎಜ್ರನು 9:10

ಹಾಗಾದರೆ ನನ್ನ ದೇವರೇ, ಇದರ ತರುವಾಯ ನಾವು ಏನು ಹೇಳೋಣ? ಪ್ರವಾದಿಗಳಾದ ನಿನ್ನ ಸೇವಕರ ಮುಖಾಂತರ ನೀನು ಆಜ್ಞಾಪಿಸಿದ ನಿನ್ನ ಆಜ್ಞೆಗಳನ್ನು ತೊರೆದಿದ್ದೇವೆ.

ಸಂದರ್ಭದೊಂದಿಗೆ ಓದಿ · ಎಜ್ರನು 9

8ಈಗ ನಮ್ಮ ದೇವರು, ನಮ್ಮ ಕಣ್ಣುಗಳು ಕಳೆಗೊಳ್ಳುವ ಹಾಗೆಯೂ ನಮ್ಮ ದಾಸತ್ವದಲ್ಲಿ ನಮ್ಮನ್ನು ಸ್ವಲ್ಪ ಉಜ್ಜೀವಿಸುವ ಹಾಗೆಯೂ ನಮಗಾಗಿ ಜನಶೇಷವನ್ನು ಉಳಿಸಿ ತನ್ನ ಪರಿಶುದ್ಧ ಸ್ಥಾನದಲ್ಲಿ ನಮಗೆ ಮೊಳೆಯನ್ನು ಕೊಡುವದಕ್ಕೂ ಸ್ವಲ್ಪ ಹೊತ್ತು ನಮ್ಮ ದೇವರಾಗಿರುವ ಕರ್ತನಿಂದ ನಮಗೆ ದಯವು ದೊರಕಿತು.

9ನಾವು ದಾಸರಾಗಿದ್ದೆವು; ಆದಾಗ್ಯೂ ನಮ್ಮ ದೇವರು ನಮ್ಮ ದಾಸತ್ವದಲ್ಲಿ ನಮ್ಮ ಕೈ ಬಿಟ್ಟುಬಿಡದೆ ನಮ್ಮನ್ನು ಉಜ್ಜೀವಿಸುವದಕ್ಕೂ ನಮ್ಮ ದೇವರ ಆಲಯವನ್ನು ಕಟ್ಟಿಸುವದಕ್ಕೂ ಅದರ ಹಾಳಾ ದವುಗಳನ್ನು ದುರಸ್ತು ಮಾಡುವದಕ್ಕೂ ಯೆಹೂದ ದಲ್ಲಿ ಮತ್ತು ಯೆರೂಸಲೇಮಿನಲ್ಲಿ ನಮಗೆ ಗೋಡೆ ಯನ್ನು ಕೊಡುವದಕ್ಕೂ ಪಾರಸಿಯ ಅರಸುಗಳ ಸಮ್ಮು ಖದಲ್ಲಿ ನಮ್ಮ ಮೇಲೆ ಕೃಪೆಯನ್ನು ಮುಂದುವರಿಸಿದ್ದಾನೆ.

10ಹಾಗಾದರೆ ನನ್ನ ದೇವರೇ, ಇದರ ತರುವಾಯ ನಾವು ಏನು ಹೇಳೋಣ? ಪ್ರವಾದಿಗಳಾದ ನಿನ್ನ ಸೇವಕರ ಮುಖಾಂತರ ನೀನು ಆಜ್ಞಾಪಿಸಿದ ನಿನ್ನ ಆಜ್ಞೆಗಳನ್ನು ತೊರೆದಿದ್ದೇವೆ.

11ನೀನು ಹೇಳಿದ್ದುನೀವು ಸ್ವಾಧೀನಮಾಡಿಕೊಳ್ಳಲು ಹೋಗುವ ದೇಶವು ಆ ದೇಶಗಳ ಜನರ ಹೊಲಸಿನಿಂದ ಮೈಲಿಗೆಯಾದ ದೇಶವಾಗಿದೆ. ಅವರು ತಮ್ಮ ಅಸಹ್ಯಗಳಿಂದಲೂ ಹೊಲೆಯಿಂದಲೂ ಅದನ್ನು ಒಂದು ಮೂಲೆಯಿಂದ ಮತ್ತೊಂದು ಮೂಲೆಯ ವರೆಗೂ ತುಂಬಿಸಿದ್ದಾರೆ.

12ಆದದರಿಂದ ನೀವು ಪ್ರಬಲವಾಗಿ ದೇಶದ ಒಳ್ಳೇ ದನ್ನು ತಿಂದು ಅದನ್ನು ಎಂದಿಗೂ ನಿಮ್ಮ ಮಕ್ಕಳಿಗೆ ಸ್ವಾಸ್ಥ್ಯವಾಗಿ ಕೊಡುವ ಹಾಗೆ ನೀವು ನಿಮ್ಮ ಕುಮಾರ್ತೆ ಯರನ್ನು ಅವರ ಕುಮಾರರಿಗೆ ಕೊಡಬೇಡಿರಿ; ಅವರ ಕುಮಾರ್ತೆಯರನ್ನು ನಿಮ್ಮ ಕುಮಾರರಿಗೆ ತಕ್ಕೊಳ್ಳ ಬೇಡಿರಿ. ಇಲ್ಲವೆ ಅವರ ಸಮಾಧಾನವನ್ನೂ ಅವರ ಮೇಲನ್ನೂ ಎಂದಿಗೂ ಬಯಸಬೇಡಿರಿ ಎಂಬದು.

ಎಜ್ರನು 9 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी