೧ ಪೂರ್ವಕಾಲವೃತ್ತಾಂತ 17:19

ನೀನು ನಿನ್ನ ಸೇವಕನನ್ನು ಬಲ್ಲೆ; ಕರ್ತನೇ, ನಿನ್ನ ಸೇವಕನ ನಿಮಿತ್ತವಾಗಿಯೂ ನಿನ್ನ ಸ್ವಂತ ಹೃದಯದ ಪ್ರಕಾರವಾಗಿಯೂ ಈ ಮಹತ್ತಾದ ಕಾರ್ಯಗಳನ್ನು ತಿಳಿಯಮಾಡುವದಕ್ಕೆ ಈ ದೊಡ್ಡಸ್ತಿಕೆಯನ್ನೆಲ್ಲಾ ತೋರಿ ಸಿದ್ದೀ.

ಸಂದರ್ಭದೊಂದಿಗೆ ಓದಿ · ೧ ಪೂರ್ವಕಾಲವೃತ್ತಾಂತ 17

17ಆದರೂ ಓ ದೇವರೇ, ಇದು ನಿನ್ನ ಕಣ್ಣುಗಳಿಗೆ ಅಲ್ಪಕಾರ್ಯವಾಗಿತ್ತು; ಓ ಕರ್ತನಾದ ದೇವರೇ, ನೀನು ನಿನ್ನ ಸೇವಕನ ಮನೆಯನ್ನು ಕುರಿತು ಬಹುಕಾಲದ ಮಾತು ಹೇಳಿದಿ; ಘನವುಳ್ಳ ಮನುಷ್ಯನ ಸ್ಥಿತಿಯ ಪ್ರಕಾರ ನನ್ನನ್ನು ಗೌರವಿಸಿದಿ.

18ನಿನ್ನ ಸೇವಕನ ಘನತೆಯ ನಿಮಿತ್ತ ದಾವೀದನು ಇನ್ನು ಹೇಳುವದೇನು?

19ನೀನು ನಿನ್ನ ಸೇವಕನನ್ನು ಬಲ್ಲೆ; ಕರ್ತನೇ, ನಿನ್ನ ಸೇವಕನ ನಿಮಿತ್ತವಾಗಿಯೂ ನಿನ್ನ ಸ್ವಂತ ಹೃದಯದ ಪ್ರಕಾರವಾಗಿಯೂ ಈ ಮಹತ್ತಾದ ಕಾರ್ಯಗಳನ್ನು ತಿಳಿಯಮಾಡುವದಕ್ಕೆ ಈ ದೊಡ್ಡಸ್ತಿಕೆಯನ್ನೆಲ್ಲಾ ತೋರಿ ಸಿದ್ದೀ.

20ಓ ಕರ್ತನೇ, ನಾವು ನಮ್ಮ ಕಿವಿಗಳಿಂದ ಕೇಳಿದ ಎಲ್ಲಾದರ ಪ್ರಕಾರ ನಿನ್ನ ಹಾಗೆ ಯಾರೂ ಇಲ್ಲ; ನಿನ್ನ ಹೊರತು ದೇವರು ಯಾರೂ ಇಲ್ಲ.

21ನಿನ್ನ ಜನರಾದ ಇಸ್ರಾಯೇಲ್ಯರ ಹಾಗೆ ಭೂಮಿ ಯಲ್ಲಿರುವ ಜನಗಳೊಳಗೆ ಜನಾಂಗವು ಯಾವದು? ಐಗುಪ್ತದಿಂದ ಬಿಡಿಸಿದ ನಿನ್ನ ಜನರ ಮುಂದೆ ಜನಾಂಗ ಗಳನ್ನು ಓಡಿಸಿ ನಿನಗೆ ದೊಡ್ಡದಾದಂಥ ಭಯಂಕರ ವಾದಂಥ ನಾಮವನ್ನು ಉಂಟು ಮಾಡಲು ದೇವರಾದ ನೀನು ನಿನ್ನ ಸ್ವಂತ ಜನರಾದ ಅವರನ್ನು ಬಿಡಿಸಲು ಹೋದಿ.

೧ ಪೂರ್ವಕಾಲವೃತ್ತಾಂತ 17 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी