ಹಗ್ಗಾಯ 1:7

ಸೈನ್ಯಗಳ ಕರ್ತನು ಹೇಳುವದೇನಂದರೆ -- ನಿಮ್ಮ ಮಾರ್ಗಗಳನ್ನು ಯೋಚಿಸಿಕೊಳ್ಳಿರಿ.

ಸಂದರ್ಭದೊಂದಿಗೆ ಓದಿ · ಹಗ್ಗಾಯ 1

5ಆದದರಿಂದ ಈಗ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನಿಮ್ಮ ಮಾರ್ಗಗಳನ್ನು ಯೋಚಿಸಿಕೊಳ್ಳಿರಿ.

6ನೀವು ಬಹಳವಾಗಿ ಬಿತ್ತಿದ್ದೀರಿ, ಆದರೆ ಕೊಂಚವಾಗಿ ತಂದಿದ್ದೀರಿ; ನೀವು ತಿನ್ನುತ್ತೀರಿ, ಆದರೆ ಸಾಕಾಗಲಿಲ್ಲ; ಕುಡಿಯುತ್ತೀರಿ, ಆದರೆ ತೃಪ್ತಿ ಯಾಗಲಿಲ್ಲ; ಧರಿಸುತ್ತೀರಿ, ಆದರೆ ಬೆಚ್ಚಗಾಗಲಿಲ್ಲ; ಸಂಬಳವನ್ನು ಸಂಪಾದಿಸುವವನು ಅದನ್ನು ತೂತು ಗಳುಳ್ಳ ಚೀಲದಲ್ಲಿ ಹಾಕುವದಕ್ಕೆ ಸಂಪಾದಿಸುತ್ತಾನೆ.

7ಸೈನ್ಯಗಳ ಕರ್ತನು ಹೇಳುವದೇನಂದರೆ -- ನಿಮ್ಮ ಮಾರ್ಗಗಳನ್ನು ಯೋಚಿಸಿಕೊಳ್ಳಿರಿ.

8ಬೆಟ್ಟಕ್ಕೆ ಹೋಗಿ ಮರವನ್ನು ತಂದು ಮನೆಯನ್ನು ಕಟ್ಟಿರಿ; ಆಗ ನಾನು ಅದಕ್ಕೆ ಮೆಚ್ಚಿ ಮಹಿಮೆಯನ್ನು ಹೊಂದುವೆನೆಂದು ಕರ್ತನು ಹೇಳುತ್ತಾನೆ.

9ಬಹಳ ಆಗಬೇಕೆಂದು ನಿರೀಕ್ಷಿ ಸಿದಿರಿ. ಆದರೆ ಇಗೋ, ಕೊಂಚವೇ ಆಯಿತು; ನೀವು ಅದನ್ನು ಮನೆಗೆ ತಂದಾಗ ನಾನು ಅದರ ಮೇಲೆ ಊದಿಬಿಟ್ಟೆನು. ಯಾತಕ್ಕೆ ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆ. ನನ್ನ ಆಲಯವು ಹಾಳಾಗಿ ರುವದರಿಂದ ನೀವು ನಿಮ್ಮ ನಿಮ್ಮ ಸ್ವಂತ ಮನೆಗಳಿಗೆ ಓಡಿ ಹೋಗುತ್ತೀರಲ್ಲಾ?

ಹಗ್ಗಾಯ 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी