ಯೆಶಾಯ 5:29

ಅವರ ಘರ್ಜ ನೆಯು ಸಿಂಹದಂತೆ ಅದೆ. ಪ್ರಾಯದ ಸಿಂಹಗಳಂತೆ ಆರ್ಭಟಿಸುತ್ತಾರೆ; ಹೌದು, ಘರ್ಜಿಸುತ್ತಾ ಬೇಟೆ ಹಿಡಿದು ಭದ್ರವಾಗಿ ಹೊತ್ತುಕೊಂಡು ಹೋಗುತ್ತಾರೆ ಅದನ್ನು ಬಿಡಿಸುವವನು ಒಬ್ಬನೂ ಇಲ್ಲ.

ಸಂದರ್ಭದೊಂದಿಗೆ ಓದಿ · ಯೆಶಾಯ 5

27ಅವರಲ್ಲಿ ಯಾರೂ ದಣಿದು ಮುಗ್ಗರಿಸರು; ಅಥವಾ ಅವರು ತೂಕಡಿಸುವದಿಲ್ಲ, ನಿದ್ರಿಸುವದಿಲ್ಲ, ಇಲ್ಲವೆ ಅವರ ನಡುಕಟ್ಟು ಬಿಚ್ಚಿಕೊಳ್ಳುವದಿಲ್ಲ. ಕೆರದ ಬಾರು ಹರಿಯುವದಿಲ್ಲ.

28ಅವರ ಬಾಣಗಳು ಹದವಾಗಿವೆ, ಅವರ ಬಿಲ್ಲುಗಳು ಬೊಗ್ಗಿವೆ, ಅವರ ಕುದುರೆಗಳ ಗೊರಸುಗಳು ಕಲ್ಲಿನಂತೆಯೂ ಅವರ ಚಕ್ರಗಳು ಬಿರು ಗಾಳಿಯಂತೆಯೂ ರಭಸವಾಗಿವೆ.

29ಅವರ ಘರ್ಜ ನೆಯು ಸಿಂಹದಂತೆ ಅದೆ. ಪ್ರಾಯದ ಸಿಂಹಗಳಂತೆ ಆರ್ಭಟಿಸುತ್ತಾರೆ; ಹೌದು, ಘರ್ಜಿಸುತ್ತಾ ಬೇಟೆ ಹಿಡಿದು ಭದ್ರವಾಗಿ ಹೊತ್ತುಕೊಂಡು ಹೋಗುತ್ತಾರೆ ಅದನ್ನು ಬಿಡಿಸುವವನು ಒಬ್ಬನೂ ಇಲ್ಲ.

30ಆ ದಿನದಲ್ಲಿ ಅವರು ಸಮುದ್ರವು ಬೋರ್ಗರೆಯುವಂತೆ ಅವರ ಮೇಲೆ ಘರ್ಜಿಸುವರು; ಭೂಮಿಯನ್ನು ದೃಷ್ಟಿ ಸಿದರೆ ಅಂಧಕಾರವನ್ನೂ ದುಃಖವನ್ನೂ ನೋಡುವಿ. ಆಕಾಶಮಂಡಲದಲ್ಲಿ ಬೆಳಕು ಕತ್ತಲಾಗುವದು.

ಯೆಶಾಯ 5 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी