೧ ಅರಸುಗಳು 14:19

ಯಾರೊಬ್ಬಾಮನ ಮಿಕ್ಕಾದ ಕ್ರಿಯೆಗಳೂ ಅವನು ಯುದ್ಧ ಮಾಡಿದ್ದೂ ಆಳಿದ್ದೂ--ಇಗೋ, ಇವು ಇಸ್ರಾಯೇಲ್ಯರ ಅರಸುಗಳ ವೃತಾಂತಗಳ ಪುಸ್ತಕ ದಲ್ಲಿ ಬರೆಯಲ್ಪಟ್ಟಿವೆ.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 14

17ಆಗ ಯಾರೊಬ್ಬಾಮನ ಪತ್ನಿ ಎದ್ದು ಹೊರಟು ತಿರ್ಚಕ್ಕೆ ಬಂದಳು. ಕರ್ತನು ಪ್ರವಾದಿಯಾದ ತನ್ನ ಸೇವಕನಾಗಿರುವ ಅಹೀಯನ ಮುಖಾಂತರ ತಿಳಿಸಿದ ವಾಕ್ಯದ ಪ್ರಕಾರವೇ ಅವಳು ಬಾಗಿಲ ಹೊಸ್ತಿಲ ಬಳಿಗೆ ಬಂದಾಗ ಮಗನು ಸತ್ತನು.

18ಇಸ್ರಾಯೇಲ್ಯರೆಲ್ಲರು ಅವನಿಗೋಸ್ಕರ ಗೋಳಾಡಿ ಅವನನ್ನು ಹೂಣಿಟ್ಟರು.

19ಯಾರೊಬ್ಬಾಮನ ಮಿಕ್ಕಾದ ಕ್ರಿಯೆಗಳೂ ಅವನು ಯುದ್ಧ ಮಾಡಿದ್ದೂ ಆಳಿದ್ದೂ--ಇಗೋ, ಇವು ಇಸ್ರಾಯೇಲ್ಯರ ಅರಸುಗಳ ವೃತಾಂತಗಳ ಪುಸ್ತಕ ದಲ್ಲಿ ಬರೆಯಲ್ಪಟ್ಟಿವೆ.

20ಯಾರೊಬ್ಬಾಮನು ಆಳಿದ ದಿವಸಗಳು ಇಪ್ಪತ್ತೆರಡು ವರುಷಗಳಾಗಿದ್ದವು. ಅವನು ತನ್ನ ಪಿತೃಗಳ ಸಂಗಡ ಮಲಗಿದನು. ಅವನ ಮಗನಾದ ನಾದಾಬನು ಅವನಿಗೆ ಬದಲಾಗಿ ಆಳಿದನು.

21ಆದರೆ ಸೊಲೊಮೋನನ ಮಗನಾದ ರೆಹಬ್ಬಾ ಮನು ಯೆಹೂದದಲ್ಲಿ ಆಳುತ್ತಾ ಇದ್ದನು. ರೆಹಬ್ಬಾ ಮನು ಆಳಲು ಆರಂಭಿಸಿದಾಗ ನಾಲ್ವತ್ತೊಂದು ವರುಷ ದವನಾಗಿದ್ದು ಕರ್ತನು ತನ್ನ ನಾಮವನ್ನು ಇಡಲು ಇಸ್ರಾಯೇಲಿನ ಸಕಲ ಗೋತ್ರಗಳೊಳಗಿಂದ ಆದು ಕೊಂಡ ಪಟ್ಟಣವಾದ ಯೆರೂಸಲೇಮಿನಲ್ಲಿ ಹದಿನೇಳು ವರುಷ ಆಳಿದನು. ಅವನ ತಾಯಿ ಅಮ್ಮೋನ್ಯಳಾದ ನಯಮಾಳೆಂಬ ಹೆಸರುಳ್ಳವಳಾಗಿದ್ದಳು.

೧ ಅರಸುಗಳು 14 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी