ಆದಿಕಾಂಡ 46:3

ಆತನು ಅವನಿಗೆ--ನಿನ್ನ ತಂದೆಯ ದೇವರಾಗಿರುವ ದೇವರು ನಾನೇ. ನೀನು ಐಗುಪ್ತಕ್ಕೆ ಇಳಿದು ಹೋಗು ವದಕ್ಕೆ ಭಯಪಡಬೇಡ; ಯಾಕಂದರೆ ಅಲ್ಲಿ ನಾನು ನಿನ್ನನ್ನು ದೊಡ್ಡಜನಾಂಗವಾಗ ಮಾಡುವೆನು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 46

1ಇಸ್ರಾಯೇಲನು ತನಗಿದ್ದದ್ದನ್ನೆಲ್ಲಾ ತಕ್ಕೊಂಡು ಬೇರ್ಷೆಬಕ್ಕೆ ಬಂದು ತನ್ನ ತಂದೆಯಾದ ಇಸಾಕನ ದೇವರಿಗೆ ಬಲಿಗಳನ್ನು ಅರ್ಪಿಸಿ ದನು.

2ದೇವರು ಇಸ್ರಾಯೇಲನಿಗೆ ರಾತ್ರಿ ದರ್ಶನ ದಲ್ಲಿ ಮಾತನಾಡಿ--ಯಾಕೋಬನೇ, ಯಾಕೋಬನೇ ಅಂದನು. ಅದಕ್ಕವನು--ಇಗೋ, ಇದ್ದೇನೆ ಅಂದನು.

3ಆತನು ಅವನಿಗೆ--ನಿನ್ನ ತಂದೆಯ ದೇವರಾಗಿರುವ ದೇವರು ನಾನೇ. ನೀನು ಐಗುಪ್ತಕ್ಕೆ ಇಳಿದು ಹೋಗು ವದಕ್ಕೆ ಭಯಪಡಬೇಡ; ಯಾಕಂದರೆ ಅಲ್ಲಿ ನಾನು ನಿನ್ನನ್ನು ದೊಡ್ಡಜನಾಂಗವಾಗ ಮಾಡುವೆನು.

4ನಾನು ನಿನ್ನ ಸಂಗಡ ಐಗುಪ್ತಕ್ಕೆ ಹೋಗುವೆನು. ನಾನೇ ನಿಶ್ಚಯವಾಗಿ ನಿನ್ನನ್ನು ಮೇಲಕ್ಕೆ (ಕಾನಾನಿಗೆ) ತಿರಿಗಿ ಬರಮಾಡುವೆನು. ಯೋಸೇಫನು ನಿನ್ನ ಕಣ್ಣುಗಳ ಮೇಲೆ ತನ್ನ ಕೈ ಇಡುವನು ಅಂದನು.

5ಆಗ ಯಾಕೋಬನು ಎದ್ದು ಬೇರ್ಷೆಬದಿಂದ ಹೊರಟನು. ಇಸ್ರಾಯೇಲನ ಮಕ್ಕಳು ತಮ್ಮ ತಂದೆಯಾದ ಯಾಕೋಬನನ್ನೂ ತಮ್ಮ ಚಿಕ್ಕವರನ್ನೂ ತಮ್ಮ ಹೆಂಡತಿಯರನ್ನೂ ಫರೋಹನು ಕಳುಹಿಸಿದ ಬಂಡಿಗಳ ಮೇಲೆ ಏರಿಸಿಕೊಂಡು ಹೋದರು.

ಆದಿಕಾಂಡ 46 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी