೨ ಸಮುವೇಲನು 19:4

ಆದರೆ ಅರಸನು ಮೋರೆಯನ್ನು ಮುಚ್ಚಿಕೊಂಡು ಮಹಾ ಶಬ್ದ ದಿಂದ--ನನ್ನ ಮಗನಾದ ಅಬ್ಷಾಲೋಮನೇ, ಅಬ್ಷಾ ಲೋಮನೇ, ನನ್ನ ಮಗನೇ, ನನ್ನ ಮಗನೇ ಎಂದು ಗೋಳಾಡಿದನು.

ಸಂದರ್ಭದೊಂದಿಗೆ ಓದಿ · ೨ ಸಮುವೇಲನು 19

2ಆ ದಿನ ಆ ಜಯವು ಎಲ್ಲಾ ಜನರಿಗೂ ದುಃಖವಾಯಿತು. ಯಾಕಂದರೆ ಅರಸನು ತನ್ನ ಮಗನಿಗೋಸ್ಕರ ವ್ಯಥೆ ಪಡುತ್ತಾ ಇದ್ದಾನೆಂದು ಜನರು ಕೇಳಿದರು.

3ಆದ ದರಿಂದ ಜನರು ಯುದ್ಧದಲ್ಲಿ ಓಡಿಹೋಗಿ ಅವಮಾನ ಪಟ್ಟು ಕಳ್ಳತನವಾಗಿ ಬರುವ ಹಾಗೆ ಆ ದಿನದಲ್ಲಿ ಕಳ್ಳತನವಾಗಿ ಪಟ್ಟಣದೊಳಗೆ ಬಂದರು.

4ಆದರೆ ಅರಸನು ಮೋರೆಯನ್ನು ಮುಚ್ಚಿಕೊಂಡು ಮಹಾ ಶಬ್ದ ದಿಂದ--ನನ್ನ ಮಗನಾದ ಅಬ್ಷಾಲೋಮನೇ, ಅಬ್ಷಾ ಲೋಮನೇ, ನನ್ನ ಮಗನೇ, ನನ್ನ ಮಗನೇ ಎಂದು ಗೋಳಾಡಿದನು.

5ಆಗ ಯೋವಾಬನು ಮನೆಯೊಳಗೆ ಅರಸನ ಬಳಿಗೆ ಬಂದು ಅವನಿಗೆ--

6ನೀನು ನಿನ್ನ ಶತ್ರು ಗಳನ್ನು ಪ್ರೀತಿಮಾಡಿ ನಿನ್ನ ಮಿತ್ರರನ್ನು ಹಗೆಮಾಡಿ ದ್ದರಿಂದ ಈ ಹೊತ್ತು ನಿನ್ನ ಪ್ರಾಣವನ್ನೂ ಕುಮಾರರ ಪ್ರಾಣಗಳನ್ನೂ ಕುಮಾರ್ತೆಯರ ಪ್ರಾಣಗಳನ್ನೂ ಹೆಂಡತಿಯರ ಪ್ರಾಣಗಳನ್ನೂ ಉಪಪತ್ನಿಗಳ ಪ್ರಾಣ ಗಳನ್ನೂ ರಕ್ಷಿಸಿದ ನಿನ್ನ ಸೇವಕರ ಮುಖಗಳನ್ನು ನಾಚಿಕೆ ಪಡಿಸಿದ್ದೀ. ಪ್ರಧಾನರಾದವರೂ ಸೇವಕರಾದವರೂ ನಿನಗೆ ಏನೂ ಇಲ್ಲವೆಂದು ಈಹೊತ್ತು ತಿಳಿಯ ಮಾಡಿದಿ. ಈಹೊತ್ತು ನಾವೆಲ್ಲರೂ ಸತ್ತು ಅಬ್ಷಾಲೋ ಮನು ಬದುಕಿದ್ದರೆ ನಿನಗೆ ಸಂತೋಷವಾಗುತ್ತಿತ್ತೆಂದು ನನಗೆ ತಿಳಿಯುತ್ತದೆ.

೨ ಸಮುವೇಲನು 19 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी