ಲೂಕನು 7:26

ಆದರೆ ಏನು ನೋಡುವದಕ್ಕಾಗಿ ಹೋದಿರಿ? ಪ್ರವಾದಿಯನ್ನೋ? ಹೌದು, ಪ್ರವಾದಿಗಿಂತಲೂ ಹೆಚ್ಚಿನವನನ್ನು ಎಂದು ನಾನು ನಿಮಗೆ ಹೇಳುತ್ತೇನೆ.

ಸಂದರ್ಭದೊಂದಿಗೆ ಓದಿ · ಲೂಕನು 7

24ಯೋಹಾನನ ದೂತರು ಹೊರಟು ಹೋದ ಮೇಲೆ ಆತನು ಯೋಹಾನನ ವಿಷಯವಾಗಿ ಮಾತನಾಡಲಾರಂಭಿಸಿ ಜನರಿಗೆ--ನೀವು ಯಾವದನ್ನು ನೋಡುವದಕ್ಕಾಗಿ ಅಡವಿಗೆ ಹೋದಿರಿ? ಗಾಳಿಯಿಂದ ಅಲ್ಲಾಡುವದಂಟನ್ನೋ?

25ಆದರೆ ನೀವು ಏನು ನೋಡುವದಕ್ಕಾಗಿ ಹೋದಿರಿ? ಇಗೋ, ನಯವಾದ ಉಡುಪನ್ನು ಧರಿಸಿದ್ದ ಮನುಷ್ಯನನ್ನೋ? ಶೋಭಾಯ ಮಾನವಾದ ಉಡುಪುಗಳನ್ನು ಧರಿಸಿಕೊಂಡು ಸುಖ ವಾಗಿ ಜೀವಿಸುವವರು ರಾಜರ ಓಲಗಗಳಲ್ಲಿ ಇರುತ್ತಾರೆ.

26ಆದರೆ ಏನು ನೋಡುವದಕ್ಕಾಗಿ ಹೋದಿರಿ? ಪ್ರವಾದಿಯನ್ನೋ? ಹೌದು, ಪ್ರವಾದಿಗಿಂತಲೂ ಹೆಚ್ಚಿನವನನ್ನು ಎಂದು ನಾನು ನಿಮಗೆ ಹೇಳುತ್ತೇನೆ.

27ಇಗೋ, ನಿನ್ನ ದಾರಿಯನ್ನು ನಿನ್ನ ಮುಂದೆ ಸಿದ್ಧ ಮಾಡುವಂತೆ ನನ್ನ ದೂತನನ್ನು ನಿನ್ನ ಮುಂದೆ ಕಳುಹಿಸುತ್ತೇನೆ ಎಂದು ಯಾವನ ವಿಷಯದಲ್ಲಿ ಬರೆದಿತ್ತೋ ಅವನೇ ಇವನು.

28ಯಾಕಂದರೆ-- ಸ್ತ್ರೀಯರಲ್ಲಿ ಹುಟ್ಟಿದವರೊಳಗೆ ಬಾಪ್ತಿಸ್ಮ ಮಾಡಿಸುವ ಯೋಹಾನನಿಗಿಂತ ದೊಡ್ಡ ಪ್ರವಾದಿಯು ಯಾವನೂ ಇಲ್ಲ; ಆದರೆ ದೇವರ ರಾಜ್ಯದಲ್ಲಿ ಅತ್ಯಲ್ಪನಾದವನು ಅವನಿಗಿಂತಲೂ ದೊಡ್ಡವನಾಗಿದ್ದಾನೆ ಎಂದು ನಾನು ನಿಮಗೆ ಹೇಳುತ್ತೇನೆ ಅಂದನು.

ಲೂಕನು 7 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी