೨ ಸಮುವೇಲನು 14:29

ಆದದರಿಂದ ಅಬ್ಷಾಲೋಮನು ಅರಸನ ಬಳಿಗೆ ಕಳುಹಿಸುವದಕ್ಕಾಗಿ ಯೋವಾಬನನ್ನು ಕರೇಕಳುಹಿಸಿದನು. ಆದರೆ ಅವನು ಅವನ ಬಳಿಗೆ ಬರಲ್ಲೊಲ್ಲದೆ ಹೋದನು. ಎರಡನೇ ಸಾರಿ ಅವನನ್ನು ಕರೇಕಳುಹಿಸಿದನು; ಮತ್ತೂ ಅವನು ಬರಲ್ಲೊಲ್ಲದೆ ಹೋದನು.

ಸಂದರ್ಭದೊಂದಿಗೆ ಓದಿ · ೨ ಸಮುವೇಲನು 14

27ಅಬ್ಷಾಲೋಮನಿಗೆ ಮೂರು ಮಂದಿ ಕುಮಾರರೂ ತಾಮಾರ್‌ ಎಂಬ ಒಬ್ಬ ಕುಮಾರ್ತೆಯೂ ಹುಟ್ಟಿದರು. ಇವಳು ಸೌಂದರ್ಯ ವುಳ್ಳ ಸ್ತ್ರೀಯಾಗಿದ್ದಳು.

28ಹೀಗೆಯೇ ಅಬ್ಷಾಲೋಮನು ಅರಸನ ಮುಖ ವನ್ನು ನೋಡದೆ ಪೂರ್ಣವಾಗಿ ಎರಡು ವರುಷ ಯೆರೂಸಲೇಮಿನಲ್ಲಿ ವಾಸವಾಗಿದ್ದನು.

29ಆದದರಿಂದ ಅಬ್ಷಾಲೋಮನು ಅರಸನ ಬಳಿಗೆ ಕಳುಹಿಸುವದಕ್ಕಾಗಿ ಯೋವಾಬನನ್ನು ಕರೇಕಳುಹಿಸಿದನು. ಆದರೆ ಅವನು ಅವನ ಬಳಿಗೆ ಬರಲ್ಲೊಲ್ಲದೆ ಹೋದನು. ಎರಡನೇ ಸಾರಿ ಅವನನ್ನು ಕರೇಕಳುಹಿಸಿದನು; ಮತ್ತೂ ಅವನು ಬರಲ್ಲೊಲ್ಲದೆ ಹೋದನು.

30ಆದದರಿಂದ ಅವನು ತನ್ನ ಸೇವಕರಿಗೆ--ನೋಡಿರಿ, ನನ್ನ ಹೊಲಕ್ಕೆ ಸವಿಾಪ ವಾಗಿ ಯೋವಾಬನ ಹೊಲವಿದೆ; ಅದರಲ್ಲಿ ಜವೆ ಗೋಧಿ ಅದೆ; ನೀವು ಹೋಗಿ ಅದನ್ನು ಬೆಂಕಿಯಿಂದ ಸುಟ್ಟುಬಿಡಿರಿ ಅಂದನು. ಹಾಗೆಯೇ ಅಬ್ಷಾಲೋಮನ ಸೇವಕರು ಆ ಹೊಲಕ್ಕೆ ಬೆಂಕಿಯನ್ನು ಹಚ್ಚಿದರು.

31ಆಗ ಯೋವಾಬನು ಎದ್ದು ಅಬ್ಷಾಲೋಮನ ಮನೆಗೆ ಬಂದು ಅವನಿಗೆ--ನನ್ನ ಹೊಲವನ್ನು ನಿನ್ನ ಸೇವಕರು ಬೆಂಕಿಯಿಂದ ಸುಟ್ಟುಬಿಟ್ಟದ್ದೇನು ಎಂದು ಕೇಳಿದನು.

೨ ಸಮುವೇಲನು 14 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी