ನೀವು ಅವುಗಳ ಕಾಲಗಳಲ್ಲಿ ಪ್ರಕಟಿಸಬೇಕಾದ ಪವಿತ್ರ ಸಭಾಕೂಟ ಗಳೂ ಕರ್ತನ ಹಬ್ಬಗಳೂ ಇವೇ.
2ಇಸ್ರಾಯೇಲ್ ಮಕ್ಕಳೊಂದಿಗೆ ನೀನು ಮಾತನಾಡಿ ಅವರಿಗೆ ಹೇಳಬೇಕಾದದ್ದೇನಂದರೆ--ನೀವು ಪರಿಶುದ್ಧ ಸಭೆಗಳಾಗಿ ಪ್ರಕಟಿಸಬೇಕಾದ ಕರ್ತನ ಹಬ್ಬಗಳು ಇವೇ,
3ಆರು ದಿವಸ ಕೆಲಸಮಾಡಬೇಕು, ಆದರೆ ಏಳನೆಯ ದಿವಸವು ವಿಶ್ರಾಂತಿಯ ಸಬ್ಬತ್ ದಿವಸವಾಗಿ ಪರಿಶುದ್ಧ ಸಭಾಕೂಟವಾಗಿರುವದು; ನೀವು ಆ ದಿನ ದಲ್ಲಿ ಕೆಲಸಮಾಡಬಾರದು; ನಿಮ್ಮ ಎಲ್ಲಾ ನಿವಾಸಗಳಲ್ಲಿ ಅದು ಕರ್ತನ ಸಬ್ಬತ್ತಾಗಿರುವದು.
4ನೀವು ಅವುಗಳ ಕಾಲಗಳಲ್ಲಿ ಪ್ರಕಟಿಸಬೇಕಾದ ಪವಿತ್ರ ಸಭಾಕೂಟ ಗಳೂ ಕರ್ತನ ಹಬ್ಬಗಳೂ ಇವೇ.
5ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿವ ಸದ ಸಾಯಂಕಾಲದಲ್ಲಿ ಕರ್ತನ ಪಸ್ಕವು.
6ಅದೇ ತಿಂಗಳಿನ ಹದಿನೈದನೆಯ ದಿನದಲ್ಲಿ ಕರ್ತನಿಗೆ ಹುಳಿ ಯಿಲ್ಲದ ರೊಟ್ಟಿಯ ಹಬ್ಬವಿರುವದು; ಏಳು ದಿವಸಗಳ ವರೆಗೆ ನೀವು ಹುಳಿಯಿಲ್ಲದ ರೊಟ್ಟಿಯನ್ನು ತಿನ್ನತಕ್ಕದ್ದು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ